ನವದೆಹಲಿ 26 ಫೆಬ್ರವರಿ :
ಆ್ಯಂಕರ್ : ನವದೆಹಲಿಯ ಭಾರತ್ ಮಂಟಪಂನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಾರತ್ ಟೆಕ್ಸ್ ೨೦೨೪ ಅನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಭಾರತ್ ಮಂಟಪಂ ಹಾಗೂ ಯಶೋಭೂಮಿಯಲ್ಲಿ ಏಕಕಾಲಕ್ಕೆ ಈ ಸಮಾವೇಶ ನಡೆಯುತ್ತಿರುವುದು ಐತಿಹಾಸಿಕವಾಗಿದೆ. ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಂದಿನ ೨೫ ವರ್ಷದಲ್ಲಿ ಭಾರತವನ್ನು ಅಭಿವೃದ್ಧಿಪಡಿಸಲು ಭಾರತ ಸಂಕಲ್ಪ ಮಾಡಿದೆ. ಬಡವರು, ಯುವಕರು, ರೈತರು, ಮಹಿಳೆಯರು ಮತ್ತು ಜವಳಿ ಕ್ಷೇತ್ರವು ಪ್ರಗತಿಗೆ ಪೂರಕವಾಗಿದೆ. ವಿಕಸಿತ ಭಾರತಕ್ಕೆ ಆದ್ಯತೆ ನೀಡುತ್ತಿದ್ದೇವೆ ಎಂದು ಹೇಳಿದರು. ೪ ದಿನಗಳ ಟೆಕ್ಸ್ಟೈಲ್ ಸಮಾರಂಭವು ಜಾಗತಿಕ ಜವಳಿ ಸಮಾರಂಭಗಳಲ್ಲಿಯೇ ಅತಿದೊಡ್ಡದು ಎಂದು ಪರಿಗಣಿಸಲಾಗಿದೆ.
ಭಾರತ ಟೆಕ್ಸ್ – ೨೦೨೪ ಸುಮಾರು ೬೫ ಸಭೆಗಳನ್ನು ಒಳಗೊಂಡಿರಲಿದ್ದು, ಈ ಕ್ಷೇತ್ರ ಎದುರಿಸುತ್ತಿರುವ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಾಗತಿಕ ಸಿಇಒಗಳು ೩ ಸಾವಿರದ ೫೦೦ಕ್ಕೂ ಹೆಚ್ಚು ವಸ್ತು ಪ್ರದರ್ಶನಗಳು ಹಾಗೂ ೩ ಸಾವಿರ ಖರೀದಿದಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ೪೦ ಸಾವಿರ ಉದ್ಯಮಿಗಳು, ವಿದ್ಯಾರ್ಥಿಗಳು, ನೇಕಾರರು, ಕಲಾವಿದರು ಹಾಗೂ ಜವಳಿ ಕಾರ್ಮಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ವರ್ಷದ ಭಾರತ್ ಟೆಕ್ಸ್ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತದೆ, ರಫ್ತುಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಜವಳಿ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
