ದೆಹಲಿ,18 ಅಕ್ಟೋಬರ್ :
ಆ್ಯಂಕರ್ :ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಇಂದಿನಿಂದ ಮೂರು ದಿನಗಳ ಕಾಲ ಬಿಹಾರ್ ರಾಜ್ಯದ ಪ್ರವಾಸ ಕೈಗೊಳ್ಳಲಿದ್ದಾರೆ. ಪಾಟ್ನಾದಲ್ಲಿ ಅವರು, ೨೦೨೩ ರಿಂದ ೨೦೨೮ ರ ಅವಧಿಯ ನಾಲ್ಕನೇ ಕೃಷಿ ರಸ್ತೆ ನಕ್ಷೆಯನ್ನು ಬಿಡುಗಡೆ ಮಾಡಲಿದ್ದಾರೆ. ನಾಳೆ ಅವರು, ಮೋತಿಹಾರಿಯಲ್ಲಿ ಮಹಾತ್ಮಗಾಂಧಿ ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಸಂಜೆ ರಾಷ್ಟ್ರಪತಿ ಅವರು, ಪಾಟ್ನಾದಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೊದಲ ಘಟಿಕೋತ್ಸವ ಉದ್ದೇಶಿಸಿ, ಭಾಷಣ ಮಾಡಲಿದ್ದಾರೆ. ದಕ್ಷಿಣ ಬಿಹಾರದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲೂ ಪಾಲ್ಗೊಳ್ಳಲು ದ್ರೌಪದಿ ಮುರ್ಮು ಅವರು, ಗಯಾಗೆ ಭೇಟಿ ನೀಡಲಿದ್ದಾರೆ.
