ಕೋಲ್ಕತ್ತಾ, 6 ಮಾರ್ಚ್:
ಆ್ಯಂಕರ್:ಈಗಾಗಲೇ ದೇಶದ ಬಹುತೇಕ ನಗರಗಳಲ್ಲಿ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ನಗರಗಳಲ್ಲಿನ ಸಂಚಾರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪ್ರಯಾಣಿಕರನ್ನು ಅವ ರ ಗಮ್ಯಸ್ಥಾನಗಳಿಗೆ ವೇಗವಾಗಿ ತಲುಪಿಸಲು ಈ ಮೆಟ್ರೋ ರೈಲುಗಳನ್ನು ಸ್ಥಾಪಿಸಲಾಗಿದೆ. ಆದರೆ ಇತ್ತೀಚೆಗೆ, ನಮ್ಮ ದೇಶದಲ್ಲಿ ಮೊದಲ ಬಾರಿಗೆ ನೀರಿನ ಒಳಗೆ (ಅಂಡರ್ ವಾಟರ್) ಮೆಟದ್ರೋ ಸೇವೆ ಆರಂಭಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬುಧವಾರ ಈ ಮೆಟ್ರೋ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ನೀರೊಳಗೆ ಚಲಿಸುವ ಮೆಟ್ರೋ ರೈಲು ಸೇವೆಗಳು ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದಲ್ಲಿ ಆರಂಭವಾಗಲಿದೆ. ಹೂಗ್ಲಿ ನದಿಯ ಅಡಿಯಲ್ಲಿ ನಿರ್ಮಿಸಲಾಗಿರುವ ಸುರಂಗದ ಮೂಲಕ ಈ ಮೆಟ್ರೋ ರೈಲುಗಳು ಚಲಿಸಲಿವೆ.
