ನವದೆಹಲಿ, ಆ್ಯಂಕರ್:ಕಾಂಗ್ರೆಸ್ ನಿನ್ನೆ ಲೋಕಸಭೆ ಚುನಾವಣೆಗೆ ಹೊಸ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ವಿಶೇಷ ಅಂದರೆ ಕನ್ಹಯ್ಯ ಕುಮಾರ್ ಹಾಗೂ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿಗೆ ಟಿಕೆಟ್ ಘೋಷಣೆ ಮಾಡಿದೆ.
37 ವರ್ಷದ ಕನ್ಹಯ್ಯ ಕುಮರ್ಗೆ ನಾರ್ತ್ ಈಸ್ಟ್ ದೆಹಲಿ ಕ್ಷೇತ್ರದ ಟಿಕೆಟ್ ನೀಡಿದೆ. ಜೆಎನ್ಯು ವಿವಿಯ ಸ್ಟೂಡೆಂಟ್ ಯೂನಿಯನ್ನ ಮಾಜಿ ಅಧ್ಯಕ್ಷರಾಗಿದ್ದ ಕನ್ಹಯ್ಯಗೆ, ಎದುರಾಳಿಯಾಗಿ ಬಿಜೆಪಿಯಿಂದ ಸಂಸದ ಮನೋತ್ ತಿವಾರಿ ನಿಂತಿದ್ದಾರೆ. ಮೇ 25 ರಂದು ದೆಹಲಿಯಲ್ಲಿ ಮತದಾನ ನಡೆಯಲಿದೆ.
2019ರ ಲೋಕಸಭೆ ಚುನಾವಣೆ ವೇಳೆ ಕನ್ಹಯ್ಯ ಕುಮಾರ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಬಿಹಾರದ ಬೆಗುಸರೈ ಲೋಕಸಭೆ ಕ್ಷೇತ್ರದಿಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ನಿಂತು ಸೋಲನ್ನು ಅನುಭವಿಸಿದ್ದರು. ನಂತರದ ದಿನಗಳಲ್ಲಿ ಅಂದರೆ 2021ರಲ್ಲಿ ಕನ್ಹಯ್ಯ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದರು.
ಈಶಾನ್ಯ ದೆಹಲಿ ಕ್ಷೇತ್ರದಿಂದ ಕನ್ಹಯ್ಯ ಕುಮಾರ್ಗೆ ಗೆಲುವು ಸಿಗೋದು ಅಷ್ಟು ಸುಲಭ ಇಲ್ಲ. ಸದ್ಯ ಈ ಕ್ಷೇತ್ರವು ಬಿಜೆಪಿ ಭದ್ರ ಕೋಟೆಯಾಗಿದೆ. 2014, 2019ರ ಲೋಕಸಭೆ ಚುನಾವಣೆಗಳಲ್ಲಿ ಮನೋಜ್ ತಿವಾರಿ ಗೆದ್ದು, ಎರಡು ಬಾರಿ ಸಂಸದರಾಗಿದ್ದಾರೆ. 2014ರ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿ ಸಂಸದರಾಗಿದ್ದಾರೆ.
