ನವದೆಹಲಿ, 1 ಫೆಬ್ರವರಿ :
ಆ್ಯಂಕ್ಯರ್ :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವತ್ತು ಬಜೆಟ್ ಮಂಡಿಸಲಿದ್ದಾರೆ. ದೇಶದ ಜನರು ಸಾಕಷ್ಟು ಗುಡ್ನ್ಯೂಸ್ಗಳ ನಿರೀಕ್ಷೆಯಲ್ಲಿದ್ರೆ, ಬೆಳ್ಳಂಬೆಳಗ್ಗೆ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಸಿಲಿಂಡರ್ ಬೆಲೆಯನ್ನು 14 ರೂಪಾಯಿ ಏರಿಸಿ ತೈಲ ಕಂಪನಿಗಳು ಆಘಾತ ನೀಡಿವೆ.
ವಾಣಿಜ್ಯ ಬಳಕೆಯ 19 ಕೆಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಏರಿಕೆಯಾಗಿದ್ದು, ಪರಿಷ್ಕೃತ ದರವು ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ. ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ 1760.50 ರೂಪಾಯಿಗೆ ಏರಿಕೆ ಆಗಿದೆ.
ಕೋಲ್ಕತ್ತದಲ್ಲಿ 1869 ರೂಪಾಯಿನಿಂದ 1887 ರೂಪಾಯಿಗೆ ಏರಿಕೆಯಾಗಿದೆ. ಮುಂಬೈನಲ್ಲಿ 1708 ರೂಪಾಯಿಯಿಂದ 1723 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 1924.70 ರೂಪಾಯಿಯಿಂದ 1937 ರೂಗೆ ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ.
