ಮುಂಬೈ, 5 ಮೇ : ಆ್ಯಂಕರ್:ಮುಂಬೈನ ಭಯೋತ್ಪಾದನಾ ದಾಳಿ ಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಯನ್ನು ಕೊಂದಿದ್ದು ಉಗ್ರ ಅಜ್ಮಲ್ ಕಸಬ್ ಅಲ್ಲ, ಆತ ನಿರಪರಾಧಿ ಎಂದು ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ ಸಮರ್ಥಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆಸಿದ್ದ ಭಯೋತ್ಪಾದಕ ದಾಳಿಯಲ್ಲಿ ಹೇಮಂತ್ ಕರ್ಕರೆ ಸೇರಿ ಮೂವರು ಪೊಲೀಸರು ಹುತಾತ್ಮರಾಗಿದ್ದರು. ಕಾಂಗ್ರೆಸ್ ನಾಯಕ ವಾಡೆತ್ತಿಯಾರ್ ನೀಡಿರುವ ಹೇಳಿಕೆಯಲ್ಲಿ ಹೇಮಂತ್ ಕರ್ಕರೆಯನ್ನು ಕೊಂದಿದ್ದು ಕಸಬ್ ಅಲ್ಲ, ಪೊಲೀಸರೇ ಗುಂಡು ಹಾರಿಸಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಹಾಗೂ ವಕೀಲ ಉಜ್ವಲ್ ನಿಕಂ ದ್ರೋಹ ಬಗೆದಿದ್ದು, ವಾಸ್ತವವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಉಜ್ವಲ್ ಸರ್ಕಾರಿ ವಕೀಲರಾಗಿದ್ದರು. ತನಿಖೆ ವೇಳೆ ಹಲವು ಪ್ರಮುಖ ಮಾಹಿತಿಗಳು ಬೆಳಕಿಗೆ ಬಂದಿವೆ ಎಂದು ಹೇಳಿದ್ದಾರೆ. ಉಜ್ವಲ್ ನಿಕಮ್ ಹಲವು ಮಾಹಿತಿಗಳನ್ನು ಬಚ್ಚಿಟ್ಟಿದ್ದರು. ಬಿಜೆಪಿ ಏಕೆ ಇಂತಹ ದೇಶದ್ರೋಹಿಯನ್ನು ಕಣಕ್ಕಿಳಿಸುತ್ತಿದೆ ಎಂದು ವಾಡೆತ್ತಿವಾರ್ ಪ್ರಶ್ನಿಸಿದ್ದಾರೆ.
ವಾಡೆತ್ತಿವಾರ್ ಹೇಳಿಕೆ ನಿರಾಧಾರ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ನಮ್ಮ ಮೈತ್ರಿಯು ನಿಕಂ ಜತೆ ಇದ್ದರೆ ಕಾಂಗ್ರೆಸ್ ಕಸಬ್ ಜತೆ ಕೈ ಜೋಡಿಸಿದೆ ಎಂದರು. ಇಂತಹ ಆಧಾರ ರಹಿತ ಆರೋಪದಿಂದ ನಮಗೆ ಬೇಸರವಾಗಿದೆ. ವೋಟಿನ ಲಾಭಕ್ಕಾಗಿ ಜನರು ಇಂತಹ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಅಂದುಕೊಂಡಿರಲಿಲ್ಲ, ವಾಡೆತ್ತಿವಾರ್ ನನ್ನನ್ನು ಮಾತ್ರವಲ್ಲದೆ 26/11 ದಾಳಿಯಲ್ಲಿ ಪ್ರಾಣ ಕಳೆದುಕೊಂಡ 166 ಜನರನ್ನು ಅವಮಾನಿಸಿದ್ದಾರೆ ಎಂದು ನಿಕಂ ಹೇಳಿದ್ದಾರೆ.
