ರೇವಾ, ಆ್ಯಂಕರ್ :ಇತ್ತೀಚೆಗೆ ವಿಜಯಪುರದಲ್ಲಿ 2 ವರ್ಷದ ಬಾಲಕಕೊಳವೆ ಬಾವಿಗೆ ಬಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಆರು ವರ್ಷದ ಬಾಲಕನೋರ್ವ ತೆರೆದ ಕೊಳವೆ ಬಾವಿ ಒಳಕ್ಕೆ ಬಿದ್ದಿದ್ದಾನೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಭೂಮಿಯಲ್ಲಿ ಆರು ವರ್ಷದ ಬಾಲಕನೋರ್ವ ತೆರೆದ ಬೋರ್ವೆಲ್ಗೆ ಬಿದ್ದಿದ್ದು, ಸದ್ಯ ಆತನಿಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಆಟವಾಡುತ್ತಿದ್ದ ಮಗು ಬೋರ್ವೆಲ್ ಒಳಕ್ಕೆ ಬಿದ್ದಿದೆ. ಈ ಘಟನೆ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಮಗುವನ್ನು ಬೋರ್ವೆಲ್ನಿಂದ ಹೊರತೆಗೆಯಲು ಕಾರ್ಯಚರಣೆ ಆರಂಭಗೊಂಡಿದೆ. ಎರಡು ಜೆಸಿಬಿ ಮೂಲಕ ಕೆಲಸಗಳು ನಡೆಯುತ್ತಿವೆ. ವಾರಣಾಸಿಯ ರಕ್ಷಣಾ ತಂಡ ಶೀಘ್ರದಲ್ಲೇ ಸ್ಥಳಕ್ಕೆ ಬರಲಿದ್ದು ಮಗುವನ್ನು ಕಾಪಾಡಲು ಪ್ರಯತ್ನಗಳು ನಡೆಯುತ್ತಿವೆ.
