ಡೆಹ್ರಾಡೂನ್, 08 ಆಗಸ್ಟ್ (ಹಿ.ಸ.) :
ಆ್ಯಂಕರ್ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿಯಲ್ಲಿ ಭೂಕುಸಿತದಿಂದ ಉಂಟಾದ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, ನಾಲ್ಕನೇ ದಿನವೂ ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
MI-17 ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳ ಸಹಾಯದಿಂದ ಸಿಲುಕಿದವರಿಗೆ ಆಹಾರ, ಔಷಧಿ, ಕುಡಿಯುವ ನೀರು ಒದಗಿಸಲಾಗುತ್ತಿದೆ. ಹವಾಮಾನ ಅಡೆತಡೆ ಉಂಟುಮಾಡಿದರೂ ಕಾರ್ಯಾಚರಣೆ ನಿರಂತರವಾಗಿದ್ದು, ಸಾರ್ವಜನಿಕರನ್ನು ಐಟಿಬಿಪಿ ಮಟ್ಲಿ ಕ್ಯಾಂಪ್ ಹಾಗೂ ಜಾಲಿಗ್ರಾಂಟ್‌ಗೆ ಸ್ಥಳಾಂತರಿಸಲಾಗುತ್ತಿದೆ.
ಭೂಕುಸಿತದಿಂದ ಬದ್ರಿನಾಥ, ಗಂಗೋತ್ರಿ, ಕೇದಾರನಾಥ ಯಾತ್ರಾ ಮಾರ್ಗ ಹಾನಿಗೊಳಗಾದರೆ, 381 ರಸ್ತೆಗಳ ಪೈಕಿ 235 ರಸ್ತೆಗಳನ್ನು ಈಗಾಗಲೇ ತೆರೆಯಲಾಗಿದೆ. ಉಳಿದ ರಸ್ತೆಗಳ ತೆರೆಯುವ ಕೆಲಸ ವೇಗವಾಗಿ ನಡೆಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
