ಹೈದರಾಬಾದ್, 30 ನವೆಂಬರ್ (ಹಿ.ಸ):
ಆ್ಯಂಕರ್ :
ತೆಲಂಗಾಣದಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ವಿಧಾನಸಭಾ ಚುನಾವಣೆಯ ಮತದಾನ ಆರಂಭಗೊಂಡಿದೆ
ರಾಷ್ಟ್ರೀಯ ಮತ್ತು ಪ್ರಾದೇಶಿಕ ಸೇರಿದಂತೆ ೧೦೯ ಪಕ್ಷಗಳಿಂದ ಒಟ್ಟು ೨ ಸಾವಿರದ ೨೯೦ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸ್ಪರ್ಧಿಗಳಲ್ಲಿ ೨೨೧ ಮಹಿಳೆಯರು ಹಾಗೂ ಒಬ್ಬ ತೃತೀಯ ಲಿಂಗಿ ಸೇರಿದ್ದಾರೆ. ರಾಜ್ಯದಲ್ಲಿ ೩೫ ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮೊದಲ ಬಾರಿಗೆ ಹೈದರಾಬಾದ್ ನಗರದಲ್ಲಿ ಮಹಿಳೆಯರು, ವಿಕಲ ಚೇತನರು ಹಾಗೂ ಯುವಕರಿಗೆ ನಿರ್ಧಿಷ್ಟ ಸಂಖ್ಯೆಯ ವಿಷಯಾಧಾರಿತ ಮತದಾನ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಮಹಿಳೆಯರೇ ನಿರ್ವಹಿಸಲಿರುವ ಮತಗಟ್ಟೆಗಳಲ್ಲಿ ಎಲ್ಲ ಸಿಬ್ಬಂದಿ ಮಹಿಳೆಯರೇ ಆಗಿರುತ್ತಾರೆ. ವಿಕಲಚೇತನ ಮತಗಟ್ಟೆಗಳಲ್ಲಿ ದೈಹಿಕವಾಗಿ ಅಶಕ್ತರಾಗಿರುವ ೪ ರಿಂದ ೫ ಸಿಬ್ಬಂದಿಗಳು ಸಂಪೂರ್ಣವಾಗಿ ನಿರ್ವಹಿಸಲಿದ್ದಾರೆ. ಯುವ ನಿರ್ವಹಣೆಯ ಮತಗಟ್ಟೆಗಳನ್ನು ಸಂಪೂರ್ಣವಾಗಿ ಮೊದಲ ಬಾರಿ ಮತ ಚಲಾಯಿಸಲಿರುವ ಯುವಕರು ನಿರ್ವಹಿಸಲಿದ್ದು, ಈ ಸಿಬ್ಬಂದಿಯ ಸರಾಸರಿ ವಯಸ್ಸು ಸುಮಾರು ೨೩ ಎಂದು ನಿಗದಿಪಡಿಸಲಾಗಿದೆ.
ಚುನಾವಣಾ ಪ್ರಚಾರದಲ್ಲಿ ವಿರೋಧ ಪಕ್ಷಗಳು ಆಡಳಿತಾರೂಢ ಬಿಆರ್ಎಸ್ ಪಕ್ಷದ ಕುಟುಂಬ ಆಡಳಿತ, ಭ್ರಷ್ಟಾಚಾರ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಹೆಚ್ಚು ಪ್ರಸ್ತಾಪಿಸಿದ್ದವು. ೩ ಕೋಟಿ ೨೬ ಲಕ್ಷ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ೧೧೯ ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ ೭ ರಿಂದ ಸಂಜೆ ೬ ರವರೆಗೆ ಮತದಾನ ನಡೆಯಲಿದೆ
ಹಿಂದೂಸ್ತಾನ್ ಸಮಾಚಾರ್
