ಜೈಪುರ, 6 ಜನವರಿ(ಹಿ.ಸ):
ಆ್ಯಂಕರ್ :
ರಾಜಸ್ತಾನದ ಜೈಪುರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರ ಮೂರು ದಿನಗಳ ಸಮ್ಮೇಳನ ನಿನ್ನೆಯಿಂದ ಆರಂಭವಾಗಿದೆ. ಇಂದು ಎರಡನೇ ದಿನ ಹಾಗೂ ನಾಳೆ ಅಂತಿಮ ದಿನದ ಈ ಸಮ್ಮೇಳನದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ಅವರು, ನಿನ್ನೆ ಸಂಜೆ ಜೈಪುರಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅವರನ್ನು ರಾಜಸ್ತಾನದ ರಾಜ್ಯಪಾಲ ಕಾಲ್ರಾಜ್ ಮಿಶ್ರಾ, ವಿಧಾನಸಭೆ ಸ್ಪೀಕರ್ ವಾಸುದೇವ್ ದೇವನಾಣಿ, ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಹಾಗೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಿ.ಪಿ. ಜೋಶಿ ಅವರು ಬರಮಾಡಿಕೊಂಡರು. ನಂತರ ಪ್ರಧಾನಿ ಅವರು, ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜಸ್ತಾನದ ಪಕ್ಷದ ನಾಯಕರುಗಳನ್ನು ಭೇಟಿಯಾಗಿ, ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್
