ದೆಹಲಿ, 27 ಡಿಸೆಂಬರ್(ಹಿ.ಸ):
ಆ್ಯಂಕರ್ :
ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಭಾರತ ನ್ಯಾಯ ಯಾತ್ರೆ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿದ್ಧತೆ ನಡೆಸಿದ್ದಾರೆ. ಭಾರತ್ ಜೋಡೋ ಯಾತ್ರೆ ಮಾದರಿಯಲ್ಲೇ ಈ ಭಾರತ ನ್ಯಾಯ ಯಾತ್ರೆ ಕೂಡ ನಡೆಯಲಿದೆ. ಜನವರಿ 14 ರಂದು ಯಾತ್ರೆ ಶುರುವಾಗಲಿದೆ. ಮಣಿಪುರದಿಂದ ಮುಂಬೈವರೆಗೆ ಭಾರತ ನ್ಯಾಯ ಯಾತ್ರೆ ನಡೆಯಲಿದೆ.
ಪಕ್ಷದ ಕಾರ್ಯಕ್ರಮಕ್ಕೆ ಸಂಬಂಧಿಸಿದ ವರದಿಗಳ ಪ್ರಕಾರ, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮಾದರಿಯಲ್ಲಿ ಹೊಸ ಜನಸಂಪರ್ಕ ಕಸರತ್ತನ್ನು ಮಾಡುತ್ತಿದ್ದಾರೆ. ಈಶಾನ್ಯ ಭಾರತದ ರಾಜ್ಯವಾದ ಮಣಿಪುರದಿಂದ ಜನವರಿ 14 ರಂದು ಪ್ರಾರಂಭವಾಗುವ ಪಾದಯಾತ್ರೆಯು 30 ತಿಂಗಳವರೆಗೆ ಇರುತ್ತದೆ.
ಹಿಂದೂಸ್ತಾನ್ ಸಮಾಚಾರ್
