
ಶ್ರೀಕಾಕುಳಂ, 16 ಜನವರಿ(ಹಿ.ಸ):
ಆ್ಯಂಕರ್ :
ಎರಡು ಬಸ್ಗಳು ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಲಾಸಾ ಬಳಿ ನಡೆದಿದೆ.
ಮಧ್ಯಪ್ರದೇಶದಿಂದ ಸುಮಾರು 100 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ಬಸ್ಗಳು ಡಿಕ್ಕಿಯಾಗಿವೆ. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಎರಡೂ ಬಸ್ಗಳು ಜಖಂಗೊಂಡಿವೆ. ತೀರ್ಥಯಾತ್ರೆ ಸಂಬಂಧ ಮಧ್ಯ ಪ್ರದೇಶದಿಂದ ಆಂಧ್ರಕ್ಕೆ ಬಸ್ಗಳು ಬಂದಿದ್ದವು ಎನ್ನಲಾಗಿದೆ.
ಹಿಂದೂಸ್ತಾನ್ ಸಮಾಚಾರ್
