
ನವದೆಹಲಿ, 30 ನವೆಂಬರ್ (ಹಿ.ಸ):
ಆ್ಯಂಕರ್ :
ವಿದೇಶಾಂಗ ವ್ಯವಹಾರಗಳು ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ರಾಜ್ಕುಮಾರ್ ರಂಜನ್ ಸಿಂಗ್ ಇಂದಿನಿಂದ ಮೂರು ದಿನಗಳ ಕಾಲ ಮಲೇಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯು ೨೦೧೫ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಲೇಷ್ಯಾ ಭೇಟಿಯ ಸಮಯದಲ್ಲಿ ಸ್ಥಾಪಿಸಲಾದ ಭಾರತ-ಮಲೇಷ್ಯಾ ವರ್ಧಿತ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸುವ ಗುರಿಯನ್ನು ಹೊಂದಿದೆ. ಕಳೆದ ನವೆಂಬರ್ ೭ ರಂದು ನವದೆಹಲಿಯಲ್ಲಿ ನಡೆದ ಭಾರತ-ಮಲೇಷ್ಯಾ ಜಂಟಿ ಆಯೋಗದ ಸಭೆಯ ತಿಳಿವಳಿಕೆಗಳನ್ನು ಮುಂದಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ. ಈ ಪ್ರವಾಸದ ಸಮಯದಲ್ಲಿ ಸಚಿವರು ತಮ್ಮ ಸಹವರ್ತಿಗಳನ್ನು ಒಳಗೊಂಡಂತೆ ಮಲೇಷ್ಯಾ ಸರ್ಕಾರದ ಹಲವಾರು ಮಂತ್ರಿಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಸಚಿವರು ಭಾರತೀಯ ಮೂಲದವರ ಜಾಗತಿಕ ಸಂಸ್ಥೆ – ಜಿಒಪಿಐಒನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
