ವಾಷಿಂಗ್ಟನ್, 19 ಆಗಸ್ಟ್ (ಹಿ.ಸ.):
ಆ್ಯಂಕರ್:
ರಷ್ಯಾ–ಉಕ್ರೇನ್ ಯುದ್ಧಕ್ಕೆ ತೆರೆ ಎಳೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ 40 ನಿಮಿಷಗಳ ದೂರವಾಣಿ ಸಂಭಾಷಣೆ ನಡೆಸಿದರು.
ಸಭೆಯಲ್ಲಿ ಯುರೋಪಿಯನ್ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್, ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ, ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ, ಫಿನ್ಲ್ಯಾಂಡ್ ನಾಯಕರು ಉಪಸ್ಥಿತರಿದ್ದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಪ್ರಕಾರ, ಶೀಘ್ರದಲ್ಲೇ ಪುಟಿನ್–ಝೆಲೆನ್ಸ್ಕಿ ನೇರ ಸಭೆ ನಡೆಯಲಿದ್ದು, ನಂತರ ತ್ರಿಪಕ್ಷೀಯ ಶೃಂಗಸಭೆ ನಡೆಯಲಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ 7–10 ದಿನಗಳಲ್ಲಿ ರಷ್ಯಾ ಜೊತೆಗಿನ ಶಾಂತಿ ಮಾತುಕತೆಗೆ ಭದ್ರತಾ ಖಾತರಿ ಕರಡು ಮಂಡಿಸಲಾಗುವುದು ಎಂದು ಘೋಷಿಸಿದರು. ಇದರಲ್ಲು ಶಸ್ತ್ರಾಸ್ತ್ರ ಪೂರೈಕೆ, ಮಿತ್ರ ರಾಷ್ಟ್ರಗಳ ಬದ್ಧತೆ ಮತ್ತು ರಕ್ಷಣಾ ಉದ್ಯಮದ ಅಭಿವೃದ್ಧಿ ಪ್ರಮುಖ ಅಂಶಗಳಾಗಿವೆ.
—————
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
