ದೆಹಲಿ, 9 ಜನವರಿ(ಹಿ.ಸ):
ಆ್ಯಂಕರ್ :
ಮಾಲ್ಡೀವ್ಸ್ಗೆ ಬಹಿಷ್ಕಾರ.. ಭಾರತದಲ್ಲೇ ಸುಂದರ ಪ್ರವಾಸಿ ತಾಣಗಳಿರುವಾಗ ಅಲ್ಲಿಗೆ ಏಕೆ ಹೋಗಬೇಕು. ಜನಾಂಗೀಯ ನಿಂದನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಮಾಲ್ಡೀವ್ಸ್ ವಿರುದ್ಧ ಭಾರತೀಯರು ಅಕ್ಷರಶಃ ರೊಚ್ಚಿಗೆದ್ದಿದ್ದಾರೆ. ಮಾಲ್ಡೀವ್ಸ್ ಬದಲು ಲಕ್ಷ ದ್ವೀಪಕ್ಕೆ ಭಾರತೀಯ ಪ್ರವಾಸ ಅಂತ ಭರ್ಜರಿ ಅಭಿಯಾನ ಕೈಗೊಳ್ಳಲಾಗಿದೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಬಾಲಿವುಡ್ ನಟಿ ಪೂನಂ ಪಾಂಡೆ ಬೆಂಬಲ ಸೂಚಿಸಿದ್ದಾರೆ.
ಮಾಲ್ಡೀವ್ಸ್ ಬದಲು ಲಕ್ಷದ್ವೀಪಕ್ಕೆ ಭಾರತದ ಪ್ರವಾಸಿಗರ ಅಭಿಯಾನಕ್ಕೆ ಸಾಥ್ ನೀಡಿದ ವೀರೇಂದ್ರ ಸೆಹ್ವಾಗ್ ಉಡುಪಿ, ಅಂಡಮಾನ್ ಬೀಚ್ನ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಉಡುಪಿ, ಅಂಡಮಾನ್ನಲ್ಲೇ ಎಷ್ಟೊಂದು ಸುಂದರವಾದ ಬೀಚ್ಗಳಿವೆ. ಅಷ್ಟೇ ಅಲ್ಲ ಭಾರತದಲ್ಲಿ ಹಲವಾರು ರಮಣೀಯ ತಾಣಗಳೂ ಇವೆ. ಹಲವು ಪ್ರವಾಸಿ ತಾಣಗಳಿಗೆ ಈಗ ಮೂಲಭೂತ ಸೌಕರ್ಯಗಳನ್ನು ಪೂರೈಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಲ್ಡೀವ್ಸ್ ಸಚಿವರು ನೀಡಿದ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಪ್ರವಾಸೋದ್ಯಮವನ್ನು ಆಕರ್ಷಿಸಲು ಭಾರತವೂ ಸಶಕ್ತವಾಗಿದೆ. ನೀವು ನಿಮ್ಮ ಅಚ್ಚುಮೆಚ್ಚಿನ ಭಾರತದ ಪ್ರವಾಸಿ ತಾಣದ ಫೋಟೋಗಳನ್ನು ಶೇರ್ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.
ವೀರೇಂದ್ರ ಸೆಹ್ವಾಗ್ ಅವರ ಈ ಫೋಟೋ ಅಭಿಯಾನ ಸಾಕಷ್ಟು ಮಂದಿಗೆ ಇಷ್ಟವಾಗಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, ನಮ್ಮ ನೆಲದ ಸೌಂದರ್ಯ ತಾಣಗಳಿಗೆ ಭೇಟಿ ನೀಡುವುದು ನಮಗೆ ಹೆಚ್ಚು ಉತ್ಸಾಹ ತರುತ್ತದೆ ಇದು ಈಗ ಪ್ರಸ್ತುತವೂ ಹೌದು. ನಾನು ಲಕ್ಷದ್ವೀಪ, ಅಂಡಮಾನ್ಗೆ ಭೇಟಿ ನೀಡಿದ್ದೇನೆ. ಅಂಡಮಾನ್, ಲಕ್ಷದ್ವೀಪದಲ್ಲಿ ಅದೆಷ್ಟು ಸುಂದರವಾದ ತಾಣಗಳಿವೆ. ಲಕ್ಷದ್ವೀಪದ ಬೀಚ್ನಲ್ಲಿ ಕಾಲ ಕಳೆಯುವುದು ಅದ್ಭುತ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
