ಕೆರಿಬಿಯನ್ , 20ನವೆಂಬರ್ (ಹಿ.ಸ):
ಆ್ಯಂಕರ್ :
ಡೊಮಿನಿಕನ್ ರಿಪಬ್ಲಿಕ್ ದೇಶದಲ್ಲಿ ಭಾರೀ ಮಳೆಗೆ ಮಕ್ಕಳು ಸೇರಿ 21 ಜನ ಸಾವನ್ನಪ್ಪಿದ್ದಾರೆ. ಮಳೆಯಿಂದ ಡೊಮಿನಿಕನ್ ರಿಪಬ್ಲಿಕ್ ನಗರಗಳು ಮುಳುಗುವ ಹಂತಕ್ಕೆ ಬಂದಿದೆ. ಕಳೆದ 48 ಗಂಟೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಜನ ಜೀವನ ಅಸ್ಥವ್ಯಸ್ಥವಾಗಿದೆ. ಮಳೆಯಿಂದ ನಗರದ ಮೂಲಸೌಕರ್ಯಗಳು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆರಿಬಿಯನ್ದಲ್ಲಿ ಅನೇಕ ಮನೆಗಳು ನೆಲಸಮಗೊಂಡಿದ್ದು, ಈ ಬಗ್ಗೆ ಅಧ್ಯಕ್ಷ ಲೂಯಿಸ್ ಅಬಿನಾಡರ್ ಅವರು ವರದಿಯನ್ನು ತರಿಸಿಕೊಂಡಿದ್ದಾರೆ. ಇಂತಹ ಘಟನೆ ನಮ್ಮ ದೇಶದ ಇತಿಹಾಸದಲ್ಲೇ ಮೊದಲು ಎಂದು ಹೇಳಿದ್ದಾರೆ.
ಇನ್ನು ಹವಾಮಾನ ತಂಬಾ ಹದಗೆಟ್ಟಿದ್ದು, ಇದನ್ನು ನಂಬಲು ಸಾಧ್ಯವಿಲ್ಲ, ಮಳೆಯಿಂದ ಅನೇಕ ಮೂಲಸೌಕರ್ಯಗಳು ಹಾನಿಯಾಗಿದೆ ಎಂದು ಹೇಳಿದ್ದಾರೆ. ಮಳೆ ಮುನ್ನಚ್ಚರಿಕೆ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದ್ದು, ಇನ್ನು ಅನೇಕ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಳೆಯಿಂದ ಗುಡ್ಡಾಗಾಡು ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ಕಲ್ಲು-ಬಂಡೆಗಳು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕೆಲವೊಂದು ಕಡೆ ಮನೆ ಗೋಡೆಗಳು ಕುಸಿದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲದ ಬಗ್ಗೆ ತನಿಖೆ ನಡೆಸುವಂತೆ ಡೊಮಿನಿಕನ್ ರಿಪಬ್ಲಿಕ್ ಸಚಿವಾಲಯ ಆದೇಶ ನೀಡಿದೆ.
ಹಿಂದೂಸ್ತಾನ್ ಸಮಾಚಾರ್
