ಡಬ್ಲಿನ್,24ನವೆಂಬರ್ (ಹಿ.ಸ):
ಆ್ಯಂಕರ್ :
ಐರ್ಲೆಂಡ್ನ ರಾಜಧಾನಿ ಡಬ್ಲಿನ್ನಲ್ಲಿ ಶಾಲೆಯ ಹೊರಭಾಗ ಮೂವರು ಮಕ್ಕಳಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಈ ಕಾರಣದಿಂದ ಪ್ರತಿಭಟನಾಕಾರರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಾನ್ನೆಲ್ ಸೇತುವೆ ಬಳಿ ಲಿಫೆ ನದಿಯ ಮೇಲೆ ಕಾರುಗಳು ಹಾಗೂ ಬಸ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಕೆಲವು ಜನರು ಇದೇ ಸಂದರ್ಭದಲ್ಲಿ ಅಂಗಡಿಗಳನ್ನು ಕೂಡ ಲೂಟಿ ಮಾಡಿದರು. ಡಬ್ಲಿನ್ನ ಪಾರ್ನೆಲ್ ಸ್ಕ್ವೇರ್ ಈಸ್ಟ್ನಲ್ಲಿ ನಡೆದ ಚೂರಿ ಇರಿತದಲ್ಲಿ ಐದು ವರ್ಷದ ಬಾಲಕಿಗೆ ಗಂಭೀರ ಗಾಯಗಳಾಗಿವೆ.
ಆದರೆ ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಘರ್ಷಣೆಗಳು ನಡೆಯುತ್ತಿವೆ, ಹಲವಾರು ವಾಹನಗಳು ಮತ್ತು ಟ್ರಾಮ್ಗೆ ಬೆಂಕಿ ಹಚ್ಚಲಾಗಿದೆ, ಪಟಾಕಿಗಳನ್ನು ಹಚ್ಚಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
