ವಾಷಿಂಗ್ಟನ್, 16 ಜುಲೈ (ಹಿ.ಸ.) :
ಆ್ಯಂಕರ್ : ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಟ್ರಂಪ್ ಆಡಳಿತ ಕಠಿಣ ನೀತಿ ಜಾರಿಗೆ ತಂದಿದೆ.
ಇನ್ನು ಮುಂದೆ ದಾಖಲೆರಹಿತ ವಲಸಿಗರಿಗೆ ಜಾಮೀನು ವಿಚಾರಣೆಯ ಅವಕಾಶ ಇಲ್ಲ. ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ ಈ ನೀತಿಯನ್ನು ಜುಲೈ 8ರಂದು ಘೋಷಿಸಿದೆ.
ಈ ಕ್ರಮದಂತೆ, ಬಂಧಿತ ವಲಸಿಗರನ್ನು ತಿಂಗಳುಗಳು ಅಥವಾ ವರ್ಷಗಳ ಕಾಲ ಬಂಧನದಲ್ಲಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಐಸಿಇ ಗೆ $45 ಬಿಲಿಯನ್ ಅನುದಾನ ಒದಗಿಸಲಾಗಿದ್ದು, ಬಂಧನ ಕೇಂದ್ರಗಳಲ್ಲಿ ಹಾಸಿಗೆಗಳು 80,000 ರಿಂದ 100,000 ಕ್ಕೆ ಹೆಚ್ಚಿಸಲಾಗುತ್ತದೆ.
ವಕೀಲರು ಈ ಕ್ರಮ ಮಾನವೀಯತೆಯ ವಿರುದ್ಧವಿದ್ದು, ಹಲವರ ಕುಟುಂಬಗಳಿಗೆ ಭೀತಿ ಉಂಟುಮಾಡಲಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
