ಮಸ್ಕಟ್, 1 ಫೆಬ್ರವರಿ :
ಆ್ಯಂಕ್ಯರ್ :
ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು, ಮಸ್ಕಟ್ ನಲ್ಲಿ ೧೨ನೇ ಜಂಟಿ ಮಿಲಿಟರಿ ಸಹಕಾರ ಸಮಿತಿಯ ಸಭೆಯಲ್ಲಿ ಓಮನ್ನ ರಕ್ಷಣಾ ಸಚಿವಾಲಯದ ಪ್ರಧಾನಕಾರ್ಯದರ್ಶಿ ಡಾ. ಮೊಹಮ್ಮದ್ ಬಿನ್ ನಸೀರ್ ಬಿನ್ ಅಲಿ ಅಲ್ ಝಾಬಿ ಅವರೊಂದಿಗೆ ಜಂಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಭಯ ಪಕ್ಷಗಳು ಭಾರತ ಮತ್ತು ಓಮನ್ ದೇಶಗಳ ನಡುವೆ ರಕ್ಷಣಾ ಸಹಕಾರವನ್ನು ಪರಿಶೀಲಿಸಿದರು. ಮತ್ತು ಕೈಗೊಂಡ ಕ್ರಮಗಳನ್ನು ಪ್ರಶಂಸಿಸಿದವು.
