ನವದೆಹಲಿ,
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರಿಷಸ್ ಪ್ರವಾಸದಲ್ಲಿದ್ದು, ಇದರ ಭಾಗವಾಗಿ ಇಂದು ಭಾರತ ಮತ್ತು ಮಾರಿಷಸ್ ನಡುವೆ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಸಭೆಯಲ್ಲಿ, ಹಲವಾರು ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು. ಜತೆಗೆ ಹಲವಾರು ಯೋಜನೆಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಅವರು ಮಾರಿಷಸ್ನ ಕೆಲವು ಪ್ರಮುಖ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಆಪ್ರವಾಸಿ ಘಾಟ್ ಮತ್ತು ಇಂಟರ್ ಕಾಂಟಿನೆಂಟಲ್ ಸ್ಲೇವರಿ ಮ್ಯೂಸಿಯಂಗೆ ಭೇಟಿ ನೀಡಲಿದ್ದಾರೆ.
