ಕಂಪಲ್, 19 ಜನವರಿ(ಹಿ.ಸ):
ಆ್ಯಂಕರ್ :
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ನನ್ನು ಭೇಟಿ ಆಗಿದ್ದಾರೆ. ಉಭಯ ದೇಶಗಳ ನಡುವಿನ ಸಣ್ಣ ಬಿಕ್ಕಟ್ಟಿನ ಮಧ್ಯೆಯೂ ಪ್ರಾಮಾಣಿಕ ಮಾತುಕತೆ ನಡೆದಿದೆ. ಇಬ್ಬರ ಮಾತುಕತೆಯನ್ನು ಜೈಶಂಕರ್ ‘Frank conversation’ ಎಂದು ಬಣ್ಣಿಸಿದ್ದಾರೆ.
ಎರಡು ದೇಶಗಳ ಅಸಮಾಧಾನಗಳ ಮಧ್ಯೆಯೂ ಉಗಾಂಡದ ರಾಜಧಾನಿ ಕಂಪಲ್ನಲ್ಲಿ ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ಕಂಪಲದಲ್ಲಿ ಎರಡು ದಿನಗಳ NAM (Non-Aligned Movement) ಶೃಂಗಸಭೆ ನಡೆಯುತ್ತಿದ್ದು, ಹೀಗಾಗಿ ಜೈಶಂಕರ್ ವಿದೇಶ ಪ್ರವಾಸದಲ್ಲಿದ್ದಾರೆ.
ಜೈಶಂಕರ್ ಭೇಟಿಯನ್ನು ಅಲ್ಲಿನ ಸಚಿವ ಜಮೀರ್ ಸಂತೋಷ ವ್ಯಕ್ತಪಡಿಸಿದ್ದಾರೆ. ಮಾಲ್ಡೀವ್ಸ್ನಲ್ಲಿರುವ ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚರ್ಚೆಯಾಗಿದೆ. ಜೊತೆಗೆ ಮಾಲ್ಡೀವ್ಸ್ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಸ್ಟಾರ್ಕ್ ಮತ್ತು ನ್ಯಾಮ್ನ ಸಹಕಾರದ ಬಗ್ಗೆ ಉನ್ನತ ಮಟ್ಟದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಎಂದು ಮಾಲ್ಡೀವ್ಸ್ ಸಚಿವರು ತಿಳಿಸಿದ್ದಾರೆ.
ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದು ಮಾಲ್ಡೀವ್ಸ್ ಹೇಳಿದೆ. ಮಾಲ್ಡೀವ್ಸ್ನಲ್ಲಿ ನೆಲೆಸಿರುವ ಸೇನಾ ಸಿಬ್ಬಂದಿ ವಿಚಾರದಲ್ಲಿ ಉಂಟಾಗಿರುವ ಗೊಂದಲ ಪರಿಹರಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. ಮಾಲ್ಡೀವ್ಸ್ ಸರ್ಕಾರವು ಭಾರತೀಯ ಸೈನಿಕರನ್ನು ಹಿಂಪಡೆಯಲು ಮಾರ್ಚ್ 15ರ ಗಡುವು ನೀಡಿದೆ. ಎರಡು ಸುಧಾರಿತ ಲಘು ಹೆಲಿಕಾಪ್ಟರ್ಗಳು ಮತ್ತು ಡಾರ್ನಿಯರ್ ವಿಮಾನಗಳ ನೆರವನ್ನು ಭಾರತ ಮಾಲ್ಡೀವ್ಸ್ಗೆ ನೀಡುತ್ತಿದೆ. ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
