ಗಾಜಾ,21ನವೆಂಬರ್ (ಹಿ.ಸ):
ಆ್ಯಂಕರ್ :
ಸಂಘರ್ಷಪೀಡಿತ ಉಕ್ರೇನ್ ಗೆ ಭೇಟಿ ನೀಡಿದ ಅಮೆರಿಕ ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಮಿಲಿಟರಿ ನೆರವು ಘೋಷಿಸಿದ್ದಾರೆ.
ಕೀವ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಕ್ರೇನ್ಗೆ ೧೦೦ ಮಿಲಿಯನ್ ಡಾಲರ್ ಹೊಸ ಮಿಲಿಟರಿ ನೆರವು ಘೋಷಿಸಿದರು.
ಉಕ್ರೇನ್ ಅಧಿಕಾರಿಗಳೊಂದಿಗೆ ಸಭೆಯ ನಂತರ ಅವರು ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಿದರು. ದೀರ್ಘಾವಧಿಯವರೆಗೂ ಅಮೆರಿಕ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು.
ಫೆಬ್ರವರಿ ೨೦೨೨ರಲ್ಲಿ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಉಕ್ರೇನ್ಗೆ ಅಮೆರಿಕ ೪೪ ಶತಕೋಟಿ ಡಾಲರ್ಗಿಂತಲೂ ಹೆಚ್ಚಿನ ಸಹಾಯವನ್ನು ಒದಗಿಸಿದೆ.
ಹಿಂದೂಸ್ತಾನ್ ಸಮಾಚಾರ್
