ಬೆಂಗಳೂರು, 07 ಜುಲೈ (ಹಿ.ಸ.) : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಹುನಿರೀಕ್ಷಿತ ಚಿತ್ರ ‘ಕಾಂತಾರ ಭಾಗ 1’ ಅಕ್ಟೋಬರ್ 2 ರಂದು ವಿಶ್ವಾದ್ಯಾಂತ ಬಿಡುಗಡೆಯಾಗಲಿದೆ. ಚಿತ್ರತಂಡವು ಇದನ್ನು ಅಧಿಕೃತವಾಗಿ ಘೋಷಿಸಿದ್ದು, ಇತ್ತೀಚೆಗೆ ರಿಷಬ್ ಶೆಟ್ಟಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.
BulletsIn
-
‘ಕಾಂತಾರ ಭಾಗ 1’ ಚಿತ್ರ ಅಕ್ಟೋಬರ್ 2 ರಂದು ವಿಶ್ವಾದ್ಯಾಂತ ಬಿಡುಗಡೆಯಾಗಲಿದೆ.
-
ಚಿತ್ರತಂಡವು ಇದು ರಿಷಬ್ ಶೆಟ್ಟಿ ಹುಟ್ಟುಹಬ್ಬದಂದು ವಿಶೇಷ ಪೋಸ್ಟರ್ ಜೊತೆಗೆ ಘೋಷಣೆ ಮಾಡಿತು.
-
ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
-
ಪೋಸ್ಟರ್‌ನಲ್ಲಿ, ಅವರು ಕೈಯಲ್ಲಿ ಕೊಡಲಿ ಹಾಗೂ ಬಾಣಗಳಿಂದ ಚುಚ್ಚಿದ ಗುರಾಣಿ ಹಿಡಿದಿದ್ದಾರೆ.
-
‘ದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ…’ ಎಂಬ ನುಡಿಗಟ್ಟಿನೊಂದಿಗೆ ಪೋಸ್ಟರ್ ಬಿಡುಗಡೆಯಾಯಿತು.
-
ಅ. 2ರ ಗುರುವಾರ ಗಾಂಧಿ ಜಯಂತಿಯ ದಿನದಿಂದ ಮೂರು ದಿನದ ವಾರಾಂತ್ಯದ ರಜೆ ಇರುವುದರಿಂದ, ಚಿತ್ರಕ್ಕೆ ಹೆಚ್ಚುವರಿ ಲಾಭದ ನಿರೀಕ್ಷೆ ಇದೆ.
-
ದೀಪಾವಳಿ ಹಬ್ಬದ ನಂತರದ ವಾರಗಳಲ್ಲಿ ಚಿತ್ರಕ್ಕೆ ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ನಿರೀಕ್ಷಿಸಲಾಗಿದೆ.
-
ಇತ್ತಿಚೆಗೆ ಚಿತ್ರತಂಡದಲ್ಲಿ ಕೆಲವು ಅವಘಡಗಳು ನಡೆದಿದ್ದರೂ, ಚಿತ್ರವು ನಿಗದಿತ ದಿನಾಂಕಕ್ಕೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
-
‘ಕಾಂತಾರ: ಚಾಪ್ಟರ್ 1’ ಏಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
-
ಚಿತ್ರವು ವಿಶ್ವಾದ್ಯಾಂತ ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ.
