ಬಳ್ಳಾರಿ, 16 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸ್ಥಾಪಕ, ಶಾಸಕ ಜಿ. ಜನಾರ್ಧನ ರೆಡ್ಡಿ ಪತ್ನಿ ಮತ್ತು ಕುಟುಂಬದ ಭದ್ರತೆಗಾಗಿ ಕಳೆದ ಎರೆಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉತ್ತರಪ್ರದೇಶ ಮೂಲಕ ಗನ್ಮ್ಯಾನ್ನ ರೈಫಲ್ ಕಳುವಾಗಿದ್ದು, ಪೊಲೀಸರು ಸಿಸಿಟಿವಿಯಲ್ಲಿ ಆರೋಪಿಯನ್ನು ಗುರುತಿಸಿದ್ದು ತನಿಖೆ ತೀವ್ರವಾಗಿ ನಡೆದಿದೆ.
ಬಳ್ಳಾರಿಯ ವೀರನಗೌಡ ಕಾಲೊನಿನಲ್ಲಿ ಇರುವ ಜಿ. ಜನಾರ್ಧನರೆಡ್ಡಿ ಅವರ ಮನೆಗೆ ಸಮೀಪದಲ್ಲಿಯೇ ಗನ್ಮ್ಯಾನ್ ಬಾಲಾ ಮುಕುಂದ ಶುಕ್ಲಾ ಅವರು ನೆಲೆಸಿದ್ದು, ಸೆಪ್ಟಂಬರ್ 28 ರಂದು ಇವರ ರೈಫಲ್ ಕಾಣೆಯಾಗಿದೆ. ಗನ್ಮ್ಯಾನ್ ತಕ್ಷಣವೇ ರೆಡ್ಡಿ ಕುಟುಂಬಕ್ಕೆ ಮಾಹಿತಿ ನೀಡಿ, ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾನೆ.
ಪೊಲೀಸರು ತೀವ್ರವಾಗಿ ತನಿಖೆ ನಡೆಸಿದ್ದು, ಗನ್ಮ್ಯಾನ್ನ ಮನೆಯ ಒಳಗಡೆ ಹೇಗೆ ಹೋಗಿದ್ದಾನೆ? ಮನೆಯ ಒಳಗಡೆ ಹೋಗಿರುವ ವ್ಯಕ್ತಿ ಪರಿಚಿತನೇ ಅಥವಾ ಅಪರಿಚಿತನೇ ಎನ್ನುವ ಮಾಹಿತಿಯನ್ನು ಸಂಗ್ರಹ ಮಾಡುತ್ತಿದ್ದು, ಸಿಸಿಟಿವಿಯಲ್ಲಿ ಆರೋಪಿಯ ಸುಳಿವು ಸಿಕ್ಕಿದೆ ಎಂದು ಪೊಲೀಸರು `ಸುದ್ದಿಮೂಲ’ಕ್ಕೆ ತಿಳಿಸಿದ್ದಾರೆ.
ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
