
ಚಿತ್ರದುರ್ಗ, 2 ಜನವರಿ(ಹಿ.ಸ):
ಆ್ಯಂಕರ್ :
ಚಿತ್ರದುರ್ಗದಲ್ಲಿ 1.50 ಕೋಟಿ ರೂ. ದರೋಡೆ ಆಗಿದ್ದ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 63.25 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ. ಹಾಗೂ ದರೋಡೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ 9 ಲಕ್ಷ ಮೌಲ್ಯದ ಕಾರು, 1.35 ಲಕ್ಷ ಮೌಲ್ಯದ ಬೈಕ್, ಕೃತ್ಯಕ್ಕೆ ಬಳಸಿದ್ದ ಕಾರು, 3 ಬೈಕ್ ವಶಕ್ಕೆ ಪಡೆಯಲಾಗಿದೆ.
2023ರ ಡಿಸೆಂಬರ್ 03ರಂದು ಈಚಲನಾಗೇನಹಳ್ಳಿ ಬಳಿ ಅಡಿಕೆ ವ್ಯಾಪಾರಿ ಇರ್ಫಾನುಲ್ಲಾ & ಜಾಕೀರ್ ಅವರನ್ನು ಅಡ್ಡಗಟ್ಟಿ ಒಂದೂವರೆ ಕೋಟಿ ದರೋಡೆ ಮಾಡಲಾಗಿತ್ತು. ಈ ಪ್ರಕರಣವನ್ನು ಭೇದಿಸಿ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ದಾವಣಗೆರೆಯ ಶಶಿಕಿರಣ್, ಮಂಜುನಾಥ್, ಪ್ರತಾಪ್ ಗೌಡ, ಕಿರಣ್, ಲಿಂಗರಾಜ್, ಬೆಂಗಳೂರಿನ ನವೀನ್, ಹುಸೇನ್, ಶ್ರೀನಿವಾಸ್, ಚಿತ್ರದುರ್ಗದ ಷಫಿವುಲ್ಲಾ, ಸಮೀರ್ ಬಾಷಾ ಬಂಧಿತರು. ಆರೋಪಿಗಳಿಂದ ಬೈಕ್, ಕಾರು, ನಗದು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹಿಂದೂಸ್ತಾನ್ ಸಮಾಚಾರ್
