



ತೋರಣಗಲ್ಲು, 10 ಮೇ :
ಆ್ಯಂಕರ್: ತೋರಣಗಲ್ಲುನ ಜಿಂದಾಲ್ ಉಕ್ಕಿನ ಕಾರ್ಖಾನೆಯ ಕಬ್ಬಿಣವನ್ನು ತಣ್ಣಗೆ ಮಾಡುವ ನೀರಿನ ಹೊಂಡದಲ್ಲಿ ಗುರುವಾರ ಬಿದ್ದಿದ್ದ ಮೂವರು ಮೃತಪಟ್ಟಿದ್ದಾರೆ.
ಮೃತರು ಸಿವಿಲ್ ವಿಭಾಗದ ತೋರಣಗಲ್ಲು ಸಮೀಪದ ಭುವನಹಳ್ಳಿ ನಿವಾಸಿ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ ಕೃಷ್ಣ ಮತ್ತು ಚೆನ್ನೈ ಮೂಲದ ಎಂ. ಶಿವಮಗದೇವ್ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಢಾರು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಿಂದಾಲ್ ನೀರಿನ ಹೊಂಡಕ್ಕೆ ಜೋಡಿಸಲಾಗಿದ್ದ ಪೈಪ್ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾದ ಕಾರಣ ರಿಪೇರಿ ಮಾಡಲು ಹೋದಾಗ ನೀರು ಹರಿಯುವಲ್ಲಿ ವ್ಯತ್ಯಾಸವಾಗಿ ಒಬ್ಬರು ಮೊದಲು ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ. ಮೊದಲು ಹೊಂಡಕ್ಕೆ ಬಿದ್ದವರನ್ನು ರಕ್ಷಣೆ ಮಾಡಲು ಹೋಗಿದ್ದ ಇಬ್ಬರು ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
