ಬೆಂಗಳೂರು, 8 ಮೇ : ಆ್ಯಂಕರ್: ಬಿಸಿಲಿನಿಂದ ಬೆಂದ್ದದ್ದಿ ರಾಜಧಾನಿಗೆ ಕಳೆದ ಕೆಲ ದಿನಗಳಿಂದ ಮಳೆ ಆಗಾಗ ಬಂದು ತಂಪೆರೆಯುತ್ತಿದೆ. ಇಂದು ಬೆಳಗಿನಜಾವ ಕೂಡ ನಗರದ ಹಲವೆಡೆ ತುಂತುರು ಮಳೆಯಾಗಿದೆ.
ಉದ್ಯಾನನಗರಿಯ ವಾಸಿಗಳು ಇನ್ನೂ ಬೆಡ್ ಮೇಲೆಯೇ ಇದ್ದು ಕಣ್ಣು ಬಿಟ್ಟಿರಲಿಲ್ಲ. ಆವಾಗಲೇ ವರುಣರಾಯ ನರದ ಹಲವೆಡೆ ಆಗಮಿಸಿದ್ದಾನೆ. ಅಂತಹ ಜೋರಾಗಿ ಬಾರದೇ ತುಂತುರು ಮಳೆಯಾಗಿದೆ. ಬೆಳಗಿನ ಜಾವದಲ್ಲೇ ಹಾಲು, ತರಕಾರಿ ತರಲು ಹಾಗೂ ಕೆಲಸದ ನಿಮಿತ್ತ ಹೊರಗೆ ಬಂದವರಿಗೆ ತುಂತುರು ಮಳೆ ಹಾಯ್ ಹೇಳಿದೆ. ಬೆಳಗಿನ ಮಳೆ ಹನಿ ಮಸ್ತ್ ಮಜಾ ನೀಡಿದೆ. ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸಂಜೆ ವೇಳೆಗೆ ಇನ್ನಷ್ಟು ಮಳೆ ಆಗಬಹುದು ಎಂದು ಹೇಳಲಾಗಿದೆ.ಸುಧಾಮನಗರ, ಟೌನ್ ಹಾಲ್, ಎಸ್.ಪಿ ರೋಡ್, ಸುಬ್ಬಯ್ಯ ಸರ್ಲ್, ಕಾರ್ಪೋರೆಷನ್, ಮೆಜೆಸ್ಟಿಕ್, ಜೆ.ಸಿ ನಗರ, ರೇಸ್ಕೋರ್ಸ್ ಸುತ್ತಮುತ್ತ ಮಳೆ ಆಗಮನವಾಗಿದೆ. ಮಳೆ ಜೊತೆ ಜೊತೆಗೆ ತಂಪಾದ ಗಾಳಿ ಬೀಸುತ್ತಿದ್ದರಿಂದ ವೆದರ್ ಎಲ್ಲ ಕೂಲ್ ಆಗಿದೆ.
