
ತೆಕ್ಕಲಕೋಟೆ, 4 ಡಿಸೆಂಬರ್(ಹಿ.ಸ):
ಆ್ಯಂಕರ್ : ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಲಕುಂದಿ ಗ್ರಾಮದಲ್ಲಿ ಮಧುಮೇಹ ಬಾಧಿತ ಗಂಡ ಹೆಂಡತಿಯನ್ನು ಕೊಲೆ ಮಾಡಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಮೈಬುನ್ನಾ ಬಿ (25) ಕೊಲೆಯಾದ ಗೃಹಿಣಿ. ಗಂಡ ರಸುಲ್ ಸಾಬ್ ಬಲ್ಕುಂದಿ ಆರೋಪಿ.
ಆರೋಪಿ ರಸುಲ್ ಸಾಬ್ ಗೆ ಮಧುಮೇಹ ಕಾಣಿಸಿಕೊಂಡಿತ್ತು. ಮಧುಮೇಹ ಬಾಧಿತ ಈತನಿಗೆ ಹೆಂಡತಿ ಚೆನ್ನಾಗಿ ಆರೈಕೆ ಮಾಡುತ್ತಿಲ್ಲ ಎಂದು ಹೊಡೆದು ಸಾಯಿಸಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಂಪತಿಗೆ ನಾಲ್ಕು ವರ್ಷ ಮತ್ತು ಎರೆಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಬಲಕುಂದಿ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
