
ಚೆನ್ನೈ, 25 ಡಿಸೆಂಬರ್(ಹಿ.ಸ):
ಆ್ಯಂಕರ್ :
ಸಲಿಂಗಿ ಸ್ನೇಹಿತನೊಬ್ಬ ಮಹಿಳಾ ಟೆಕ್ಕಿಯ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತನ್ನ ಬಾಲ್ಯದ ಸಹಪಾಠಿ – ಸಾಫ್ಟ್ವೇರ್ ಎಂಜಿನಿಯರ್ ಅನ್ನು ಭೀಕರ ರೀತಿಯಲ್ಲಿ ಸಜೀವ ದಹಿಸಿದ ಸಲಿಂಗಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಚೆನ್ನೈನ ದಕ್ಷಿಣ ಉಪನಗರದ ಕೆಳಂಬಕ್ಕಂ ಬಳಿಯ ತಲಂಬೂರ್ನಲ್ಲಿ ಶನಿವಾರ ಹುಟ್ಟುಹಬ್ಬದ ಮುನ್ನಾದಿನದಂದು ಸರ್ಪ್ರೈಸ್ ನೀಡುತ್ತೇನೆಂದು ನಂದಿನಿ ಎಂಬಾಕೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದು ಸರಪಳಿಯಿಂದ ಬಿಗಿದು, ಜೀವಂತವಾಗಿ ಸುಟ್ಟು ಹಾಕಿರುವ ಶಂಕಿತ ಆರೋಪಿಯನ್ನು ವೆಟ್ರಿಮಾರನ್ ಎಂದು ಗುರುತಿಸಲಾಗಿದ್ದು, ತನ್ನ ಹೆಸರನ್ನು ಪಾಂಡಿ ಮಹೇಶ್ವರಿ ಎಂದು ಬದಲಾಯಿಸಿಕೊಂಡಿದ್ದ
ಹಿಂದೂಸ್ತಾನ್ ಸಮಾಚಾರ್
