ಕೊಪ್ಪಳ, 19 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗಂಗಾವತಿಯ ಬೇಡರ್ ಓಣಿಯ ಹಾಗೂ ಹಾಲಿ ವಸ್ತಿ ಕೊಪ್ಪಳನಗರದ ಬನ್ನಿಕಟ್ಟಿ ಏರಿಯಾದ ನಿವಾಸಿ ಪ್ರಭುರಾಜ್ ತಂದೆ ವಿರುಪಾಕ್ಷಪ್ಪ ನಾಲ್ವಡದ (61) 2025ರ ಜುಲೈ 7 ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಗಂಗಾವತಿ ತಾಲ್ಲೂಕಿನ ವಿರೂಪಾಪುರ ಗಡ್ಡಿಯ ಅಚ್ಯುತಾಶ್ರಮದಿಂದ ಕಾಣೆಯಾಗಿದ್ದು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಗುನ್ನೆ ನಂ: 187/2025 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಚಹರೆ: ವ್ಯಕ್ತಿಯು 5.5 ಫೀಟ್ ಎತ್ತರ, ದುಂಡುಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ತಲೆ ಕೂದಲು ಹೊಂದಿದ್ದು, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ. ಕಾಣೆಯಾದಾಗ ತುಂಬು ತೋಳಿನ ಬಿಳಿಯ ಬನಿಯನ್ ಮತ್ತು ಬಿಳಿಯ ಲುಂಗಿಯನ್ನು ಧರಿಸಿರುತ್ತಾನೆ.
ಈ ಚಹರೆಯ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆ ಪಿಐ ದೂ.ಸಂ: 08533-230854, ಮೊ.ಸಂ: 9480803730, ಕೊಪ್ಪಳ ಎಸ್‌ಪಿ ಕಛೇರಿ: 08539-230111 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
