
ಬಳ್ಳಾರಿ, 15 ನವೆಂಬರ್ (ಹಿ.ಸ):
ಆ್ಯಂಕರ್ : ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬ್ರೂಸ್ಪೇಟೆ ಪೆÇಲೀಸರು ವಶಕ್ಕೆ ಪಡೆದು 20 ಟನ್ಗೂ ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದಾರೆ.
ರೂಪನಗುಡಿ ಪ್ರದೇಶದಿಂದ ರವಾನೆ ಮಾಡುತ್ತಿದ್ದ ಪಡಿತರ ಅಕ್ಕಿ ಇದಾಗಿದ್ದು, ಪೊಲೀಸರು ಅನುಮಾನಗೊಂಡು ಲಾರಿಯನ್ನು ತಡೆದು ವಿಚಾರಣೆ ನಡೆಸಿದಾಗ, ಅನ್ನಭಾಗ್ಯದ ಅಕ್ಕಿ ದಾಸ್ತಾನು ರವಾನೆ ಆಗುತ್ತಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಪಿ.ಡಿ.ಹಳ್ಳಿಯ ರಾಮಕೃಷ್ಣ ಮತ್ತು ಸಣ್ಣ ಗಾದಿಲಿಂಗ ಅವರ ಮೇಲೆ ಹಾಗು ಲಾರಿ ಚಾಲಕ – ಕ್ಲೀನರ್ ಮೇಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
