ಮುಂಬೈ, 15 ಡಿಸೆಂಬರ್(ಹಿ.ಸ):
ಆ್ಯಂಕರ್ :
ಚಿನ್ನದ ಬೆಲೆ ಆಧಾರಿತವಾದ ಹೂಡಿಕೆ ಸ್ಕೀಮ್ ಸಾವರೀನ್ ಗೋಲ್ಡ್ ಬಾಂಡ್ನ ಕೊನೆಯ ಎರಡು ಸರಣಿ ಬಿಡುಗಡೆಯ ದಿನಾಂಕ ಪ್ರಕಟಿಸಲಾಗಿದೆ. 2023-24ರ ಹಣಕಾಸು ವರ್ಷದಲ್ಲಿ ಮೊದಲೆರಡು ಬಾಂಡ್ ಟ್ರಾಂಚ್ಗಳು ಮುಗಿದಿದ್ದು, ಇನ್ನೆರಡು ಟ್ರಾಂಚ್ಗಳು ಬಿಡುಗಡೆ ಆಗುತ್ತಿವೆ. ಮೂರನೇ ಟ್ರಾಂಚ್ ಬಾಂಡ್ಗಳು ಡಿಸೆಂಬರ್ 18ಕ್ಕೆ ಬಿಡುಗಡೆ ಆಗುತ್ತವೆ. ನಾಲ್ಕನೇ ಸರಣಿಯ ಬಾಂಡ್ಗಳು 2024ರ ಫೆಬ್ರುವರಿ 12ಕ್ಕೆ ಆರಂಭವಾಗುತ್ತವೆ.
ಮೂರನೇ ಸರಣಿಯ ಎಸ್ಜಿಬಿಗಳು ಡಿಸೆಂಬರ್ 18ರಿಂದ 22ರವರೆಗೆ ಸಾರ್ವಜನಿಕರಿಗೆ ಖರೀದಿಗೆ ಲಭ್ಯ ಇರುತ್ತದೆ. ಡಿಸೆಂಬರ್ 28ಕ್ಕೆ ಬಾಂಡ್ ವಿತರಣೆ ಆಗುತ್ತದೆ.
ಇನ್ನು, ನಾಲ್ಕನೇ ಸರಣಿ ಬಾಂಡ್ಗಳು 2024ರ ಫೆಬ್ರುವರಿ 12ರಿಂದ 16ರವರೆಗೂ ಪಬ್ಲಿಕ್ ಸಬ್ಸ್ಕ್ರಿಪ್ಷನ್ಗೆ ತೆರೆದಿರುತ್ತವೆ. ಫೆಬ್ರುವರಿ 21ಕ್ಕೆ ಬಾಂಡ್ ವಿತರಣೆ ಮಾಡಲಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್
