
ನವದೆಹಲಿ, 2 ಡಿಸೆಂಬರ್(ಹಿ.ಸ):
ಆ್ಯಂಕರ್ :ಭಾರತೀಯ ರೈಲ್ವೆ ಈ ವರ್ಷದ ಏಪ್ರಿಲ್ ನಿಂದ ನವೆಂಬರ್ವರೆಗೆ ೧ ಸಾವಿರ ಮೆಟ್ರಿಕ್ ಟನ್ ಸರಕು ಸಾಗಣಿಕೆ ಮೂಲಕ ದಾಖಲೆ ನಿರ್ಮಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಸುಮಾರು ೩೬ ಮೆಟ್ರಿಕ್ ಟನ್ ನಷ್ಟು ಸುಧಾರಣೆಯಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಈ ವರ್ಷದ ಏಪ್ರಿಲ್ನಿಂದ ನವೆಂಬರ್ವರೆಗೆ ೧ ಲಕ್ಷದ ೧೦ ಸಾವಿರ ಕೋಟಿ ರೂಪಾಯಿ ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ೪ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಎಂದು ಹೇಳಿದೆ. ಈ ವರ್ಷದ ನವೆಂಬರ್ವರೆಗೆ ಸುಮಾರು ೬೫ ಮೆಟ್ರಿಕ್ ಟನ್ ಕಲ್ಲಿದ್ದಲು, ೧೪ ಮೆಟ್ರಿಕ್ ಟನ್ ಕಬ್ಬಿಣದ ಅದಿರು, ಸುಮಾರು ೫ ಮೆಟ್ರಿಕ್ ಟನ್ ಕಚ್ಛಾ ಕಬ್ಬಿಣ ಹಾಗೂ ಸಿದ್ಧಪಡಿಸಿದ ಉಕ್ಕು, ೬ ಮೆಟ್ರಿಕ್ ಟನ್ ರಸಗೊಬ್ಬರ ಸಾಗಣೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
