ನವದೆಹಲಿ, 25ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಕಲ್ಲಿದ್ದಲು ಸಚಿವಾಲಯ ತನ್ನ ವಿಶೇಷ ಅಭಿಯಾನ ೩.೦ ಅವಧಿಯಲ್ಲಿ ತ್ಯಾಜ್ಯ ವಿಲೇವಾರಿ ಮೂಲಕ ೨೮ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ. ಸ್ವಚ್ಛತೆಗೆ ಗಮನ ನೀಡಿ ಈ ವರ್ಷದ ಅಕ್ಟೋಬರ್ ೨ರಂದು ಈ ಅಭಿಯಾನ ಆರಂಭಿಸಲಾಯಿತು. ಅಭಿಯಾನದ ವೇಳೆ ೧ ಲಕ್ಷಕ್ಕೂ ಹೆಚ್ಚು ದಾಖಲಾತಿಗಳನ್ನು ಪರಿಶೀಲಿಸಲಾಯಿತು ಎಂದು ಸಚಿವಾಲಯ ತಿಳಿಸಿದೆ. ಅಭಿಯಾನದ ಸಂದರ್ಭದಲ್ಲಿ ಕಲ್ಲಿದ್ದಲು ಸಚಿವಾಲಯ ತನ್ನ ಸಾರ್ವಜನಿಕ ವಲಯದ ಉದ್ದಿಮೆಗಳ ಜೊತೆಗೂಡಿ ವಿಭಿನ್ನ ಚಟುವಟಿಕೆಗಳನ್ನು ನಿರ್ವಹಿಸಿದ್ದು, ಈ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ೫೦ ಲಕ್ಷ ಚದರ ಅಡಿಗೂ ಹೆಚ್ಚು ಪ್ರದೇಶವನ್ನು ಅದು ಮುಕ್ತಗೊಳಿಸಿದೆ.
ಹಿಂದೂಸ್ತಾನ್ ಸಮಾಚಾರ್
