ನವದೆಹಲಿ, 28ಅಕ್ಟೋಬರ್ (ಹಿ.ಸ):
ಆ್ಯಂಕರ್ :ಮುಂದಿನ ತಿಂಗಳ ೧ ರಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ೨೦೦ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಗೋಧಿಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಗೋಧಿ ಬೆಲೆಯನ್ನು ಮತ್ತಷ್ಟು ಸ್ಥಿರಗೊಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಡ್ದಾರರು ಗೋಧಿಯನ್ನು ಖರೀದಿಸಬಹುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಮೊದಲು, ಬಿಡ್ದಾರರು ಈ ಯೋಜನೆಯ ಮೂಲಕ ನೂರು ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಲು ಅವಕಾಶವನ್ನು ಹೊಂದಿದ್ದರು. ದೇಶಾದ್ಯಂತ ಪ್ರತಿ ಇ-ಹರಾಜಿಗೆ ನೀಡಲಾಗುವ ಒಟ್ಟು ಮೊತ್ತವನ್ನು ಎರಡು ಲಕ್ಷ ಮೆಟ್ರಿಕ್ ಟನ್ಗಳಿಂದ ಮೂರು ಲಕ್ಷ ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಅಕ್ಕಿ, ಗೋಧಿ ಮತ್ತು ಇತರೆ ಹಿಟ್ಟುಗಳ ಬೆಲೆಯನ್ನು ನಿಯಂತ್ರಿಸಲು ಮಾರುಕಟ್ಟೆ ಮಧ್ಯಸ್ಥಿಕೆಗಾಗಿ ಉಪಕ್ರಮದ ಭಾಗವಾಗಿ, ಗೋಧಿ ಮತ್ತು ಅಕ್ಕಿ ಇ-ಹರಾಜು ಮಾಡಲಾಗುತ್ತಿದೆ. ೨೦೨೩-೨೪ರ ಸಾಲಿನಲ್ಲಿ ೧೮ನೇ ಇ-ಹರಾಜು ನಿನ್ನೆ ನಡೆಯಿತು. ದೇಶಾದ್ಯಂತ ೪೪೪ ಡಿಪೋಗಳಿಂದ ಎರಡು ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ವಿತರಿಸಲಾಯಿತು ಎಂದು ಸಚಿವಾಲಯ ಮಾಹಿತಿ ನೀಡಿದೆ.
ಹಿಂದೂಸ್ತಾನ್ ಸಮಾಚಾರ್
