ಮುಂಬೈ,25ನವೆಂಬರ್ (ಹಿ.ಸ):
ಆ್ಯಂಕರ್ :
ನವೆಂಬರ್ 25: ಮಹಾರಾಷ್ಟ್ರ ಮೂಲದ ಅಭ್ಯುದಯ ಕೋ ಆಪರೇಟಿವ್ ಬ್ಯಾಂಕ್ನ ಆಡಳಿತದ ಬಗ್ಗೆ ಅಸಮಾಧಾನಗೊಂಡಿರುವ ಆರ್ಬಿಐ ಈ ಬ್ಯಾಂಕ್ನ ಬೋರ್ಡ್ ಅನ್ನು ಸೂಪರ್ಸೀಡ್ ಮಾಡಿದೆ. ಒಂದು ವರ್ಷ ಕಾಲ ಆರ್ಬಿಐ ಹೊಸ ಮಂಡಳಿಯನ್ನು ಈ ಬ್ಯಾಂಕ್ ನಿರ್ವಹಣೆಗೆಂದು ನೇಮಿಸಿದೆ. ವರದಿಯ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯ ಜನರಲ್ ಮ್ಯಾನೇಜರ್ ಸತ್ಯಪ್ರಕಾಶ್ ಪಾಠಕ್ ಅವರು ಒಂದು ವರ್ಷ ಕಾಲ ಅಭ್ಯುದಯ ಸಹಕಾರಿ ಬ್ಯಾಂಕ್ನ ಆಡಳಿತಗಾರರಾಗಿರಲಿದ್ದಾರೆ. ಇವರಿಗೆ ಸಹಾಯವಾಗಿ ಸಲಹೆಗಾರರ ಸಮಿತಿಯೊಂದನ್ನೂ ಆರ್ಬಿಐ ರೂಪಿಸಿದೆ.
ಹಿಂದೂಸ್ತಾನ್ ಸಮಾಚಾರ್
