ನವದೆಹಲಿ, 9 ಫೆಬ್ರವರಿ :
ಆ್ಯಂಕರ್:
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯ ಬಿಡುಗಡೆ ಮಾಡಿದ ಎಂಟು ಪ್ರಮುಖ ಕೈಗಾರಿಕಾ ಸೂಚ್ಯಂಕ ವರದಿ ಪ್ರಕಾರ, ಕಳೆದ ಡಿಸೆಂಬರ್ನಲ್ಲಿ ಎಂಟು ಪ್ರಮುಖ ಕೈಗಾರಿಕೆಗಳಲ್ಲಿ ಕಲ್ಲಿದ್ದಲು ವಲಯ ಶೇಕಡ ೧೦.೬ ರಷ್ಟು ಅತ್ಯಧಿಕ ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗಮನಾರ್ಹ ಸಾಧನೆಯಾಗಿದೆ.
ಸಿಮೆಂಟ್, ಕಲ್ಲಿದ್ದಲು, ಕಚ್ಚಾ ತೈಲ, ವಿದ್ಯುತ್, ರಸಗೊಬ್ಬರ, ನೈಸರ್ಗಿಕ ಅನಿಲ, ಸಂಸ್ಕರಿಸಿದ ಉತ್ಪನ್ನಗಳು ಮತ್ತು ಉಕ್ಕು, ಮುಂತಾದ ಎಂಟು ಪ್ರಮುಖ ಕೈಗಾರಿಕೆಗಳ ಸಂಯೋಜಿತ ಮತ್ತು ವೈಯಕ್ತಿಕ ಉತ್ಪಾದನಾ ಕಾರ್ಯಕ್ಷಮತೆಯನ್ನು ಪರಿಗಣಿಸಲಾಗಿದೆ.
ಕಲ್ಲಿದ್ದಲು ವಲಯ ಕಳೆದ ಆರು ತಿಂಗಳಲ್ಲಿ ಎರಡಂಕಿಯ ಬೆಳವಣಿಗೆ ಪ್ರತಿನಿಧಿಸುವ ಎಂಟು ಪ್ರಮುಖ ಕೈಗಾರಿಕೆಗಳ ಒಟ್ಟಾರೆ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಎಂಟು ಪ್ರಮುಖ ಕೈಗಾರಿಕೆಗಳ ಒಟ್ಟಾರೆ ಬೆಳವಣಿಗೆಗಿಂತ ಗಣನೀಯವಾಗಿ ಸಾಧನೆಯಾಗಿದೆ.
ಡಿಸೆಂಬರ್ ೨೦೨೩ ರಲ್ಲಿ ಕಲ್ಲಿದ್ದಲು ಉತ್ಪಾದನೆ ೯೨.೯೨ ದಶಲಕ್ಷ ಟನ್ ತಲುಪಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ೧೦.೭೪ ರಷ್ಟು ಗಮನಾರ್ಹ ಏರಿಕೆಯಾಗಿದೆ.
