
ನವದೆಹಲಿ, 30 ನವೆಂಬರ್ (ಹಿ.ಸ):
ಆ್ಯಂಕರ್ :
ಮಹತ್ವದ ಹೆಜ್ಜೆಯಲ್ಲಿ 16ನೇ ಹಣಕಾಸು ಆಯೋಗದ ನಿಬಂಧನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಇದೂ ಸೇರಿದಂತೆ ವಿವಿಧ ಯೋಜನೆ ಮತ್ತು ಪ್ರಸ್ತಾಪಗಳಿಗೆ ಸಮ್ಮತಿ ನೀಡಲಾಗಿದೆ. ಮುಂದೆ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಈ 16ನೇ ಹಣಕಾಸು ಆಯೋಗ ಶಿಫಾರಸುಗಳನ್ನು ಮಾಡಬಹುದು. 2026ರ ಏಪ್ರಿಲ್ 1ರಿಂದ ಆರಂಭವಾಗಿ ಐದು ವರ್ಷ ಅವಧಿಗೆ ಪ್ರಧಾನಿ ಅನುಮೋದನೆಗೆ ಬದ್ಧವಾಗಿ ಈ ಆಯೋಗದ ಶಿಫಾರಸುಗಳು ಮಾನ್ಯವಾಗಿರುತ್ತವೆ.
ಸದ್ಯ 15ನೇ ಹಣಕಾಸು ಆಯೋಗದ ನಿಯಮಗಳು 2025-26ರ ಹಣಕಾಸು ವರ್ಷದವರೆಗೂ ಮಾನ್ಯವಾಗಿರುತ್ತವೆ. ಅದಾದ ಬಳಿಕ 16ನೇ ಹಣಕಾಸು ಆಯೋಗದ ಶಿಫಾರಸುಗಳು ಗಣನೆಗೆ ಬರುತ್ತವೆ. ಹಣಕಾಸು ಆಯೋಗವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತೆರಿಗೆ ಆದಾಯದಲ್ಲಿ ಎಷ್ಟು ಪಾಲು ಹಂಚಿಕೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್
