
ನವದೆಹಲಿ,11ನವೆಂಬರ್ (ಹಿ.ಸ):
ಆ್ಯಂಕರ್ :ಭಾರತದ ಗಣಿಗಾರಿಕೆ ಮತ್ತು ಖನಿಜ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹತ್ವದ ಸುಧಾರಣೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ಗಣಿ ಸಚಿವಾಲಯ ಇದೇ ತಿಂಗಳ ೧೪ ರಿಂದ ೨೭ರ ವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಗಣಿಗಾರಿಕೆಯನ್ನು ಮೀರಿ ಸಂಪರ್ಕಿಸುವುದು ಎಂಬ ವಿಷಯದ ಬಗ್ಗೆ ಅತ್ಯಾಧುನಿಕ ಗಣಿಗಾರಿಕೆ ಪೆವಿಲಿಯನ್ ಸಿದ್ಧಪಡಿಸಿದೆ. ೫೦೬ ಚದರ ಮೀಟರ್ ವಿಸ್ತೀರ್ಣದಲ್ಲಿ ಈ ವೇದಿಕೆ ಅನಾವರಣಗೊಂಡಿದೆ. ನಮ್ಮ ದೈನಂದಿನ ಜೀವನದಲ್ಲಿ ಗಣಿಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ನಮ್ಮ ಆಹಾರ ಕಣಜಗಳ ವಿಷಯಗಳಿಂದ ಹಿಡಿದು ವಿದ್ಯುತ್ ಉತ್ಪಾದನೆ, ಮೊಬೈಲ್ ಫೋನ್ ಬ್ಯಾಟರಿಗಳು ಮತ್ತು ಔಷಧಿಗಳ ಉತ್ಪಾದನೆಯವರೆಗೆ ಎಲ್ಲದರ ಮೇಲೂ ಪ್ರಭಾವ ಬೀರುವ ಗುರಿಯನ್ನು ಈ ಉಪಕ್ರಮ ಹೊಂದಿದೆ. ಖನಿಜಗಳು ಮಾನವನ ಪ್ರಗತಿಗೆ ಮೂಲಭೂತ ಅಂಶಗಳಾಗಿವೆ. ಅವು ಅನೇಕ ಕೈಗಾರಿಕೆಗಳಿಗೆ ಕಚ್ಚಾ ವಸ್ತುವಾಗಿ ಕಾರ್ಯನಿರ್ವಹಿಸುವುದಲ್ಲದೆ, ಕಡಿಮೆ ಇಂಗಾಲ-ಹೊರಸೂಸುವ ಆರ್ಥಿಕತೆಗೆ ಜಾಗತಿಕ ಪರಿವರ್ತನೆಯಲ್ಲಿ ಶಕ್ತಿ ತುಂಬಲು ನಿರ್ಣಾಯಕ ಮತ್ತು ಪ್ರಮುಖ ವಲಯವಾಗಿವೆ. ವಿದ್ಯುನ್ಮಾನ, ದೂರ ಸಂಪರ್ಕ, ಸಾರಿಗೆ ಮತ್ತು ರಕ್ಷಣೆಯಂತಹ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳ ಆಧುನಿಕ ಅಗತ್ಯಗಳನ್ನು ಪೂರೈಸಲು ಪ್ರಮುಖವಾದ ಹೊಸ ಯುಗದ ಖನಿಜಗಳಾದ ಲಿಥಿಯಂ, ಕೋಬಾಲ್ಟ್ ಮತ್ತು ಟೈಟಾನಿಯಂ ಸೇರಿದಂತೆ ನಿರ್ಣಾಯಕ ಖನಿಜಗಳ ಪಟ್ಟಿಯನ್ನು ಸರ್ಕಾರ ಇತ್ತೀಚೆಗೆ ಗುರುತಿಸಿದೆ. ಈ ಎಲ್ಲಾ ಮಾಹಿತಿಯನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
