ಮುಂಬೈ,15ನವೆಂಬರ್ (ಹಿ.ಸ):
ಆ್ಯಂಕರ್ :
ಭಾರತದಲ್ಲಿ ಸಗಟು ಹಣದುಬ್ಬರ ಪ್ರಮಾಣ ಅಕ್ಟೋಬರ್ ತಿಂಗಳಲ್ಲಿ ಸತತ ೭ನೇ ತಿಂಗಳಲ್ಲೂ ಋಣಾತ್ಮಕ ಮಟ್ಟದಲ್ಲಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಅಕ್ಟೋಬರ್ನಲ್ಲಿ ಸಗಟು ಬೆಲೆ ಸೂಚ್ಯಂಕ ೦.೫೨ರಷ್ಟು ಕುಸಿತವನ್ನು ದಾಖಲಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ತಿಳಿಸಿದೆ. ಸಗಟು ಹಣದುಬ್ಬರವು ಸೆಪ್ಟೆಂಬರ್ ತಿಂಗಳಲ್ಲಿ ಶೇಕಡ ೦.೨೬ರಷ್ಟು ಕುಸಿತವನ್ನು ದಾಖಲಿಸಿತ್ತು. ಕಳೆದ ವರ್ಷದ ಈ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಅಕ್ಟೋಬರ್ನಲ್ಲಿ ಋಣಾತ್ಮಕ ಹಣದುಬ್ಬರ ದರ ಪ್ರಾಥಮಿಕವಾಗಿ ರಾಸಾಯನಿಕಗಳು, ರಾಸಾಯನಿಕ ಉತ್ಪನ್ನಗಳು, ವಿದ್ಯುತ್, ಜವಳಿ, ಲೋಹಗಳು, ಆಹಾರ ಉತ್ಪನ್ನಗಳು, ಕಾಗದ ಹಾಗೂ ಕಾಗದ ಉತ್ಪನ್ನಗಳ ಬೆಲೆಗಳ ಕುಸಿತದಿಂದಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
