ದೆಹಲಿ, 5 ಜನವರಿ(ಹಿ.ಸ):
ಆ್ಯಂಕರ್ :ಅಧಿಕ ಪಿಂಚಣಿ ಬಯಸುವ ಇಪಿಎಫ್ ಖಾತೆದಾರರ ವೇತನ ವಿವರವನ್ನು ಅವರು ಕೆಲಸ ಮಾಡುವ ಸಂಸ್ಥೆಗಳು ಇಪಿಎಫ್ಒದ ಡಾಟಾಬೇಸ್ಗೆ ಅಪ್ಲೋಡ್ ಮಾಡಬೇಕು. ಅದಕ್ಕೆ ಡಿಸೆಂಬರ್ 31ಕ್ಕೆ ಡೆಡ್ಲೈನ್ ಇತ್ತು. ಈಗ ಈ ಗಡುವನ್ನು 2024ರ ಮೇ 31ರವರೆಗೂ ವಿಸ್ತರಿಸಲಾಗಿದೆ. ಅಂದರೆ, ಉದ್ಯೋಗಿಗಳ ವೇತನ ವಿವರವನ್ನು ಇಪಿಎಫ್ಒಗೆ ಸಲ್ಲಿಸಲು ಇನ್ನೂ ಐದು ತಿಂಗಳು ಕಾಲಾವಕಾಶ ಇದೆ.
ಅಧಿಕ ಪಿಂಚಣಿಗೆ ಯಾವ ಉದ್ಯೋಗಿಗಳು ಅರ್ಹರು?
ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಉದ್ಯೋಗಿಗಳಿಗೂ ಅವಕಾಶ ಇಲ್ಲ. 2014ರ ಸೆಪ್ಟೆಂಬರ್ 1ಕ್ಕೆ ಮುಂಚಿನಿಂದ ಎಂಪ್ಲಾಯೀ ಪೆನ್ಷನ್ ಸ್ಕೀಮ್ನ (ಇಪಿಎಸ್) ಸದಸ್ಯರಾಗಿರುವ ಉದ್ಯೋಗಿಗಳು ಹೆಚ್ಚುವರಿ ಪಿಂಚಣಿಗೆ ಅರ್ಹರಿದ್ದಾರೆ. ವೇತನದಲ್ಲಿ ಇಪಿಎಸ್ ಖಾತೆಗೆ ಜಮೆ ಆಗುವ ಮೊತ್ತಕ್ಕೆ ಮಿತಿ ಇದೆ. ಹೆಚ್ಚುವರಿ ಪಿಂಚಣಿ ಸೌಲಭ್ಯ ಆಯ್ಕೆ ಮಾಡಿಕೊಂಡರೆ ಸಂಬಳದ ಹೆಚ್ಚು ಭಾಗವನ್ನು ಇಪಿಎಸ್ಗೆ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ.
ಹಿಂದೂಸ್ತಾನ್ ಸಮಾಚಾರ್
