ನವದೆಹಲಿ,17ನವೆಂಬರ್ (ಹಿ.ಸ):
ಆ್ಯಂಕರ್ : ಗೂಗಲ್ಗೆ ಹೆಚ್ಚಿನ ಆದಾಯ ಬರುವುದು ಅದರ ಸರ್ಚ್ ಎಂಜಿನ್ನಿಂದ. ಈ ಆದಾಯದಲ್ಲಿ ಬೇರೆ ಬೇರೆ ಸಂಬಂಧಿತ ವ್ಯಕ್ತಿ, ಕಂಪನಿಗಳಿಗೆ ಪಾಲು ಹಂಚಿಕೆ ಮಾಡುತ್ತದೆ. ಹಾಗೆಯೇ, ಆ್ಯಪಲ್ ಸಂಸ್ಥೆಗೆ ಗೂಗಲ್ ಒಂದು ವರ್ಷದಲ್ಲಿ ಮಾಡುವ ಆದಾಯ ಹಂಚಿಕೆ 10 ಬಿಲಿಯನ್ ಡಾಲರ್ಗೂ (ಸುಮಾರು 83,000 ಕೋಟಿರೂ) ಹೆಚ್ಚಂತೆ. ಗೂಗಲ್ನ ಮಾತೃ ಸಂಸ್ಥೆ ಆಲ್ಫಬೆಟ್ನ ಸಿಇಒ ಸುಂದರ್ ಪಿಚೈ ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಗೂಗಲ್ ವಿರುದ್ಧ ಕೋರ್ಟ್ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯಲ್ಲಿ ಸುಂದರ್ ಪಿಚೈ ತಮ್ಮ ಸಂಸ್ಥೆ ಪ್ರತೀ ವರ್ಷ ಆ್ಯಪಲ್ಗೆ ಸರ್ಚ್ ಆದಾಯ ಎಷ್ಟು ಹಂಚಿಕೆ ಮಾಡುತ್ತದೆ ಎಂಬ ವಿವರ ಬಹಿರಂಗಪಡಿಸಿದ್ದಾರೆ. ಆ್ಯಪಲ್ನ ಸಫಾರಿ ಬ್ರೌಸರ್ನಿಂದ ಗೂಗಲ್ಗೆ ಬರುವ ಆದಾಯದಲ್ಲಿ ಶೇ. 36ರಷ್ಟು ಪಾಲನ್ನು ಆ್ಯಪಲ್ಗೆ ಕೊಡುತ್ತಿರುವುದಾಗಿ ಗೂಗಲ್ ಸಿಇಒ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
