ಸಿಂಗಾಪುರ,20ಅಕ್ಟೋಬರ್ (ಹಿ.ಸ):
ಆ್ಯಂಕರ್ :ಸಿಂಗಾಪುರ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರು ಇಂದು ಬೆಳಗ್ಗೆ ಸಿಂಗಾಪುರ ಕೈಗಾರಿಕಾ ಸಚಿವ ಗೆನ್ ಕಿಮ್ ಯಾಂಗ್ ಅವರನ್ನು ಭೇಟಿಯಾದರು.ಹೊಸ ಕ್ಷೇತ್ರಗಳಲ್ಲಿ ದೀರ್ಘಾವಧಿ ಸಹಕಾರ ಕುರಿತು ಚರ್ಚೆ ಕೇಂದ್ರಿತವಾಗಿತ್ತು ಎಂದು ಡಾ. ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಎರಡೂ ದೇಶಗಳು ಭಾರತ-ಸಿಂಗಾಪುರ ಸಚಿವರ ದುಂಡುಮೇಜಿನ ಸಭೆಯಲ್ಲಿ ಈ ಪರಿಕಲ್ಪನೆಗಳ ಅಭಿವೃದ್ಧಿಯನ್ನು ನಿರೀಕ್ಷಿಸಿವೆ ಎಂದು ಸಚಿವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
