ದೆಹಲಿ, 19ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ೪:೩೦ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹಾರಾಷ್ಟ್ರದಲ್ಲಿ ೫೧೧ ಪ್ರಮೋದ್ ಮಹಾಜನ್ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. ಈ ಕೇಂದ್ರಗಳನ್ನು ಮಹಾರಾಷ್ಟ್ರದಾದ್ಯಂತ ೩೪ ಗ್ರಾಮೀಣ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ. ಈ ಗ್ರಾಮೀಣ ಕೌಶಲ್ಯ ವಿಕಾಸ ಕೇಂದ್ರಗಳು ಗ್ರಾಮೀಣ ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸಲು ನಾನಾ ವಲಯಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡಲಿವೆ. ಪ್ರತಿಯೊಂದು ಕೇಂದ್ರವು ಕನಿಷ್ಠ ಎರಡು ವೃತ್ತಿಪರ ಕೋರ್ಸ್ಗಳಲ್ಲಿ ೧೦೦ ಯುವಜನರಿಗೆ ತರಬೇತಿ ನೀಡಲಿವೆ. ರಾಷ್ಟ್ರೀಯ ಕೌಶಲ್ಯ ಅಬಿವೃದ್ಧಿ ನಿಗಮದ ಆಶ್ರಯದಲ್ಲಿರುವ ಸಂಸ್ಥೆಗಳು ಹಾಗೂ ನೋಂದಾಯಿತ ಕೈಗಾರಿಕಾ ಪಾಲುದಾರರು ತರಬೇತಿಯನ್ನು ನೀಡಲಿದ್ದಾರೆ. ಈ ಕೇಂದ್ರಗಳ ಸ್ಥಾಪನೆಯು ಹೆಚ್ಚು ಸಮರ್ಥ ಮತ್ತು ನುರಿತ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸುವತ್ತ ಗಮನಾರ್ಹ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.
ಹಿಂದೂಸ್ತಾನ್ ಸಮಾಚಾರ್
