
ಬೆಂಗಳೂರು, 17ಅಕ್ಟೋಬರ್ (ಹಿ.ಸ):
ಆ್ಯಂಕರ್ :
ಕಾವೇರಿಗಾಗಿ ಬುಧವಾರ(ಅ.18) ರಾಷ್ಟ್ರರಾಜಧಾನಿಯಲ್ಲಿ ಕನ್ನಡಿಗರ ಕೂಗು ಪ್ರತಿಧ್ವನಿಸಲಿದೆ. ನದಿ ನೀರು ಹಂಚಿಕೆ ಸಂಬಂಧ ಶಾಶ್ವತ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ದೆಹಲಿಯ ಜಂತರ್ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಬಳಿಕ ಪ್ರಧಾನಿ ಭೇಟಿಯಾಗಿ ಮನವಿ ಸಲ್ಲಿಸಲಿದ್ದಾರೆ.
ಈಗಾಗಲೇ ಬೆಳಗಾವಿಯಿಂದ ರೈಲಿನಲ್ಲಿ ನೂರಾರು ಜನ ತೆರಳಿದ್ದು, ಹೈದರಾಬಾದ್ ನಿಂದ 300 ಜನ ದೆಹಲಿಯತ್ತ ಹೋಗಿದ್ದಾರೆ. ಕಲಬುರ್ಗಿ, ರಾಯಚೂರಿಂದಲೂ ಕಾರ್ಯಕರ್ತರು ಪ್ರಯಾಣ ಬೆಳೆಸಿದ್ದಾರೆ. ಮಂಗಳ ವಾರ ನಗರದಿಂದಲೂ ಸುಮಾರು 700 ಜನ ಹೊರಡಲಿದ್ದು, ರಾಜ್ಯದಿಂದ ಒಟ್ಟಾರೆ 2 ಸಾವಿರ ಜನ ತೆರಳಿ ಧರಣಿ ನಡೆಸುವುದಾಗಿ ಕರವೇ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
