ನವದೆಹಲಿ, 17ಅಕ್ಟೋಬರ್ (ಹಿ.ಸ):
ಆ್ಯಂಕರ್ :
ರಾಷ್ಟ್ರಪತಿ ದ್ರೌಪದಿ ಮುರ್ಮು ದೆಹಲಿಯಲ್ಲಿ ೬೯ನೇ ರಾಷ್ಟ್ರೀಯ ಚಲಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಮುಖ್ಯ ಅತಿಥಿಗಳಾಗಿರುತ್ತಾರೆ. ೨೦೨೨ನೇ ಸಾಲಿಗೆ ಆರ್.ಮಾಧವನ್ ನಿರ್ದೇಶನದ ’ರಾಕೇಟ್ರಿ; ದಿ ನಂಬಿ ಎಫೆಕ್ಟ್’ ಚಿತ್ರ ಅತ್ಯುತ್ತಮ ಚಲನಚಿತ್ರವಾಗಿ ಆಯ್ಕೆಯಾಗಿದೆ. ’ಪುಷ್ಪ; ದಿ ರೈಸ್’ ಚಿತ್ರದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ’ಗಂಗೂಬಾಯಿ ಕಥಿಯಾವಾಡಿ’ ಮತ್ತು ’ಮಿಮಿ’ ಚಿತ್ರದಲ್ಲಿನ ನಟನೆಗಾಗಿ ಅಲಿಯಾಭಟ್ ಮತ್ತು ಕ್ರಿತಿ ಸನೊನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
ಸಂಪೂರ್ಣ ಮನರಂಜನೆಗಾಗಿ ’ಆರ್ಆರ್ಆರ್’ ಚಲನಚಿತ್ರ ಅತ್ಯುತ್ತಮ ಜನಪ್ರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ರಾಷ್ಟ್ರೀಯ ಐಕ್ಯತೆಗಾಗಿ ನೀಡಲಾಗುವ ನರ್ಗೀಸ್ ದತ್ತ್ ಪ್ರಶಸ್ತಿಗೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ’ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಆಯ್ಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್
