• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > National > ಕ್ರೀಡೆಯಲ್ಲಿ ತಂಡದ ಸಮನ್ವಯದಿಂದಲೇ ಗೆಲುವು ಸಾಧ್ಯ : ಪ್ರಧಾನಿ ಮೋದಿ
National

ಕ್ರೀಡೆಯಲ್ಲಿ ತಂಡದ ಸಮನ್ವಯದಿಂದಲೇ ಗೆಲುವು ಸಾಧ್ಯ : ಪ್ರಧಾನಿ ಮೋದಿ

CliQ INDIA
Last updated: January 5, 2026 2:15 am
CliQ INDIA
Share
3 Min Read
SHARE

ನವದೆಹಲಿ, 04 ಜನವರಿ (ಹಿ.ಸ.) :

ಆ್ಯಂಕರ್ : ವಾಲಿಬಾಲ್ ಆಟವು ಸಮತೋಲನ, ಸಮನ್ವಯ ಮತ್ತು ದೃಢಸಂಕಲ್ಪದ ನಿಜವಾದ ಪರೀಕ್ಷೆಯಾಗಿದ್ದು, ಯಾವುದೇ ಗೆಲುವು ಒಬ್ಬರ ಶಕ್ತಿಯಿಂದ ಸಾಧ್ಯವಲ್ಲ; ಅದು ತಂಡದ ಒಗ್ಗಟ್ಟು, ನಂಬಿಕೆ, ಸಮರ್ಪಣೆ ಮತ್ತು ಸಿದ್ಧತೆಯ ಫಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

“ತಂಡ ಮೊದಲು” ಎಂಬ ಧ್ಯೇಯವಾಕ್ಯವೇ ವಾಲಿಬಾಲ್‌ನ ಆತ್ಮವಾಗಿದ್ದು, ವಿಭಿನ್ನ ಕೌಶಲ್ಯಗಳಿದ್ದರೂ ಪ್ರತಿಯೊಬ್ಬ ಆಟಗಾರನು ತಂಡದ ಗೆಲುವಿಗಾಗಿ ಆಡುತ್ತಾನೆ ಎಂದು ಅವರು ಹೇಳಿದರು. ಇದೇ ತಂಡದ ಮನೋಭಾವದೊಂದಿಗೆ ದೇಶವೂ ಮುಂದುವರಿಯುತ್ತಿದೆ ಎಂದು ಪ್ರಧಾನಿ ಹೇಳಿದರು.

ವಾರಣಾಸಿಯಲ್ಲಿ ನಡೆಯುತ್ತಿರುವ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ವಾಲಿಬಾಲ್ ಮತ್ತು ದೇಶದ ಪ್ರಗತಿಯ ನಡುವೆ ಸಮಾನಾಂತರಗಳನ್ನು ಎಳೆದು ತೋರಿಸಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು. 28 ರಾಜ್ಯಗಳು ಮತ್ತು ಸಂಸ್ಥೆಗಳನ್ನು ಪ್ರತಿನಿಧಿಸುವ 58 ತಂಡಗಳಿಂದ 1,000ಕ್ಕೂ ಹೆಚ್ಚು ಆಟಗಾರರು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಜನವರಿ 4ರಿಂದ 11, 2026ರವರೆಗೆ ಇತ್ತೀಚೆಗೆ ಪೂರ್ಣಗೊಂಡ ಡಾ. ಸಂಪೂರ್ಣಾನಂದ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿ ನಡೆಯಲಿದೆ.

ಕಾಶಿಯಲ್ಲಿ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ಉದ್ಘಾಟನೆಯು “ಏಕ ಭಾರತ – ಶ್ರೇಷ್ಠ ಭಾರತ”ದ ಸುಂದರ ಚಿತ್ರಣವನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

“ವಾರಣಾಸಿಯನ್ನು ತಿಳಿಯಬೇಕಾದರೆ ವಾರಣಾಸಿಗೆ ಬರಬೇಕು” ಎಂದು ಬನಾರಸಿ ಶೈಲಿಯಲ್ಲಿ ಹೇಳಿದ ಅವರು, ಕಾಶಿ ಕ್ರೀಡಾಪ್ರಿಯ ನಗರವಾಗಿದ್ದು, ಕುಸ್ತಿ, ಬಾಕ್ಸಿಂಗ್, ರೋಯಿಂಗ್ ಮತ್ತು ಕಬಡ್ಡಿಯಂತಹ ಕ್ರೀಡೆಗಳು ಇಲ್ಲಿ ಜನಪ್ರಿಯವಾಗಿವೆ ಎಂದು ಹೇಳಿದರು.

ಕಾಶಿ ಹಿಂದೂ ವಿಶ್ವವಿದ್ಯಾಲಯ, ಯುಪಿ ಕಾಲೇಜು ಮತ್ತು ಕಾಶಿ ವಿದ್ಯಾಪೀಠದಂತಹ ಸಂಸ್ಥೆಗಳು ದಶಕಗಳಿಂದ ಕ್ರೀಡಾ ಸಂಪ್ರದಾಯವನ್ನು ಪೋಷಿಸಿಕೊಂಡು ಬಂದಿವೆ ಎಂದು ಅವರು ನೆನಪಿಸಿದರು.

ಸಾವಿರಾರು ವರ್ಷಗಳಿಂದ ವಿಜ್ಞಾನ ಮತ್ತು ಕಲೆಯ ಅನ್ವೇಷಣೆಗೆ ಆಶ್ರಯ ನೀಡಿರುವ ಕಾಶಿ, ಇಂದು ಕ್ರೀಡಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸುತ್ತಿದೆ ಎಂದು ಹೇಳಿದರು.

2014ರ ನಂತರ ಸರ್ಕಾರ ಮತ್ತು ಸಮಾಜದ ಕ್ರೀಡೆಗಳತ್ತಿನ ದೃಷ್ಟಿಕೋನದಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ ಎಂದು ಪ್ರಧಾನಿ ಹೇಳಿದರು.

ಹಿಂದೆ ಕ್ರೀಡೆಗಳ ಬಗ್ಗೆ ನಿರಾಸಕ್ತಿ ಕ್ರೀಡಾಪಟುಗಳ ಭವಿಷ್ಯವನ್ನು ಅನಿಶ್ಚಿತಗೊಳಿಸುತ್ತಿದ್ದರೆ, ಕಳೆದ ದಶಕದಲ್ಲಿ ಕ್ರೀಡಾ ವಲಯಕ್ಕೆ ಸ್ಪಷ್ಟ ಆದ್ಯತೆ ನೀಡಲಾಗಿದೆ. ಕ್ರೀಡಾ ಬಜೆಟ್ ಗಮನಾರ್ಹವಾಗಿ ಹೆಚ್ಚಿಸಲಾಗಿದ್ದು, ಇಂದಿನ ಭಾರತೀಯ ಕ್ರೀಡಾ ಮಾದರಿ ಸಂಪೂರ್ಣವಾಗಿ ಕ್ರೀಡಾಪಟು ಕೇಂದ್ರಿತವಾಗಿದೆ ಎಂದು ಅವರು ಹೇಳಿದರು.

ಪ್ರತಿಭೆ ಗುರುತಿಸುವಿಕೆ, ವೈಜ್ಞಾನಿಕ ತರಬೇತಿ, ಪೋಷಣೆ ಮತ್ತು ಪಾರದರ್ಶಕ ಆಯ್ಕೆ ಪ್ರಕ್ರಿಯೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ ಸೇರಿದಂತೆ ಹಲವು ಯೋಜನೆಗಳು ಕ್ರೀಡಾಪಟುಗಳನ್ನು ಜಾಗತಿಕ ವೇದಿಕೆಗೆ ಸಿದ್ಧಗೊಳಿಸುತ್ತಿವೆ ಎಂದು ವಿವರಿಸಿದರು.

ಕಳೆದ ದಶಕದಲ್ಲಿ ಭಾರತವು ಫೀಫಾ ಅಂಡರ್–17 ವಿಶ್ವಕಪ್, ಹಾಕಿ ವಿಶ್ವಕಪ್ ಮತ್ತು ಪ್ರಮುಖ ಚೆಸ್ ಟೂರ್ನಿಗಳ ಸೇರಿದಂತೆ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದೆ ಎಂದು ಪ್ರಧಾನಿ ಹೇಳಿದರು.

2030ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಭಾರತದಲ್ಲಿ ನಡೆಸುವ ಯೋಜನೆಯಿದ್ದು, 2036ರ ಒಲಿಂಪಿಕ್ಸ್ ಆಯೋಜನೆಗೆ ದೇಶವು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು. ಇದರಿಂದ ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶಗಳು ಸಿಗಲಿದ್ದು, ದೇಶದ ಕ್ರೀಡಾ ಪರಿಸರ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ಹೇಳಿದರು.

ಸ್ಪರ್ಧೆ ನಡೆಯುತ್ತಿರುವ ಸಿಗ್ರಾ ಕ್ರೀಡಾಂಗಣವು ಈಗ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ವಾರಣಾಸಿಯಲ್ಲಿ ಹೊಸ ಕ್ರೀಡಾ ಸಂಕೀರ್ಣಗಳು ಹಾಗೂ ಇವುಗಳ ವಿಸ್ತರಣೆ ಕಾರ್ಯಗಳು ನಡೆಯುತ್ತಿವೆ ಎಂದು ಪ್ರಧಾನಿ ಗಮನಿಸಿದರು.

ಇದರಿಂದ ಸುತ್ತಮುತ್ತಲಿನ ಜಿಲ್ಲೆಗಳ ಕ್ರೀಡಾಪಟುಗಳು ಉನ್ನತ ಮಟ್ಟದ ತರಬೇತಿಯಿಂದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಇಂತಹ ಪ್ರಮುಖ ಕ್ರೀಡಾಕೂಟಗಳು ಕೇವಲ ಕ್ರೀಡಾಪಟುಗಳಿಗೆ ವೇದಿಕೆ ನೀಡುವುದಷ್ಟೇ ಅಲ್ಲ, ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸಿ ನಗರದ ರಾಷ್ಟ್ರೀಯ ಪ್ರೊಫೈಲ್ ಅನ್ನು ಬಲಪಡಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಾರಣಾಸಿಯ ಮಣ್ಣಿನಿಂದ ಹೊರಡುವ ಪ್ರತಿಯೊಂದು ಸರ್ವಿಸ್, ಪ್ರತಿಯೊಂದು ಬ್ಲಾಕ್ ಮತ್ತು ಪ್ರತಿಯೊಂದು ಪಾಯಿಂಟ್ ಭಾರತವನ್ನು ಕ್ರೀಡಾ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.

ಭಾಗವಹಿಸುವ ಎಲ್ಲ ಆಟಗಾರರು ಬಾಬಾ ವಿಶ್ವನಾಥನ ದರ್ಶನ, ಗಂಗಾ ನದಿಯಲ್ಲಿ ನೌಕಾಯಾನ ಮತ್ತು ಕಾಶಿಯ ಸಮೃದ್ಧ ಪರಂಪರೆಯನ್ನು ಅನುಭವಿಸಬೇಕು ಎಂದು ಅವರು ಆಹ್ವಾನಿಸಿದರು.

ವಾರಣಾಸಿಯಲ್ಲಿ 72ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯ ಆಯೋಜನೆ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ಅಥ್ಲೆಟಿಕ್ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ. 58 ತಂಡಗಳಿಂದ 1,000ಕ್ಕೂ ಹೆಚ್ಚು ಆಟಗಾರರ ಭಾಗವಹಿಸುವಿಕೆ ಭಾರತೀಯ ವಾಲಿಬಾಲ್‌ನ ಸ್ಪರ್ಧಾತ್ಮಕತೆ, ಕ್ರೀಡಾ ಮನೋಭಾವ ಮತ್ತು ಉದಯೋನ್ಮುಖ ಪ್ರತಿಭೆಯ ಭವ್ಯ ಪ್ರದರ್ಶನವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಮಧ್ಯಪ್ರದೇಶದಲ್ಲಿ ಕಾರು, ಬಸ್ ಅಪಘಾತ ;ಮೂವರ ಸಾವು
ಭೀಕರ ರಸ್ತೆ ಅಪಘಾತ ; ಐವರು ಸಾವು | BulletsIn
ತೆಲಂಗಾಣದಲ್ಲಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳು ವಶ
ನರೇಂದ್ರ ಮೋದಿ ಸ್ಟೇಡಿಯಂ ಬಳಿ ಜಮಾಯಿಸಿದ ಕ್ರೀಡಾಭಿಮಾನಿಗಳು
ಮೂರು ಸೇನೆಗಳಿಗೆ ₹79 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರದ ಅನುಮೋದನೆ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ವಿಕಲಚೇತನರ ಪಾಸ್ ಅವಧಿ ವಿಸ್ತರಣೆ – Hindusthan Samachar Kannada
Next Article ಬೆಂಗಳೂರು–ಗುಂತಕಲ್ ರೈಲ್ವೆ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?