ಟೋಕಿಯೊ, 12 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಪಾನ್‌ನ ಈಶಾನ್ಯ ಭಾಗದಲ್ಲಿ ಇಂದು ಬೆಳಿಗ್ಗೆ 6.7 ತೀವ್ರತೆಯ ಭೂಕಂಪ ದಾಖಲಾಗಿದ್ದು, ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸ್ಥಳೀಯ ಸಮಯ ಬೆಳಿಗ್ಗೆ 11:44ಕ್ಕೆ, ಹೊನ್ಶು ದ್ವೀಪದ ಉತ್ತರದ ಅಮೋರಿ ಪ್ರಿಫೆಕ್ಚರ್ ಪೂರ್ವ ಕರಾವಳಿಯಲ್ಲಿ, ಸಮುದ್ರ ಮಟ್ಟದಿಂದ 20 ಕಿ.ಮೀ. ಆಳದಲ್ಲಿ ಕಂಪನ ಸಂಭವಿಸಿದೆ.
ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಹೋಕೈಡೋ, ಅಮೋರಿ, ಇವಾಟೆ ಮತ್ತು ಮಿಯಾಗಿ ಪ್ರಾಂತ್ಯಗಳ ಪೆಸಿಫಿಕ್ ಕರಾವಳಿಯಲ್ಲಿ ಒಂದು ಮೀಟರ್ ಎತ್ತರದ ಸುನಾಮಿ ಅಲೆ ಅಪ್ಪಳಿಸುವ ಸಾಧ್ಯತೆ ಇದೆ.
ಈ ವಾರದ ಆರಂಭದಲ್ಲೇ, ಸೋಮವಾರ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅಮೋರಿ ಕರಾವಳಿಯಲ್ಲಿ 34 ಮಂದಿ ಗಾಯಗೊಂಡಿದ್ದರು. ಇತ್ತೀಚಿನ ಕಂಪನಗಳ ಪರಿಣಾಮ, 8 ರಿಕ್ಟರ್ ತೀವ್ರತೆಯ ಭೂಕಂಪ ಮತ್ತು ಸುನಾಮಿಯ ಅಪಾಯ ಹೆಚ್ಚಾಗಿದೆ ಎಂದು ಹವಾಮಾನ ಸಂಸ್ಥೆ ಎಚ್ಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
