ನವದೆಹಲಿ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್ 10ರಂದು ನಡೆದ ಕಾರ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕ ಒಮರ್ ಉನ್ ನಬಿಗೆ ಆಶ್ರಯ ಹಾಗೂ ತಾಂತ್ರಿಕ–ವ್ಯವಸ್ಥಾಪನಾ ನೆರವು ನೀಡಿದ್ದ ಆರೋಪದ ಮೇಲೆ ಫರಿದಾಬಾದ್ ಮೂಲದ ಸೋಯೆಬ್‌ನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಎನ್ಐಎ ನೀಡಿರುವ ಮಾಹಿತಿ ಪ್ರಕಾರ, ಸೋಯೆಬ್ ಈ ಪ್ರಕರಣದಲ್ಲಿ ಬಂಧಿತ ಏಳನೇ ಆರೋಪಿ. ಇದಕ್ಕೂ ಮೊದಲು ಉಮರ್ ಉನ್ ನಬಿಯ ಆರು ಸಹಚರರನ್ನು ಸಂಸ್ಥೆ ಸೆರೆ ಹಿಡಿದಿತ್ತು.
ಪ್ರಕರಣದ ಹಿನ್ನಲೆ, ಹಣಕಾಸು, ಸಂಪರ್ಕ ಜಾಲ ಹಾಗೂ ಸ್ಫೋಟಕ್ಕೆ ಮುಂಚಿನ ಚಟುವಟಿಕೆಗಳ ಕುರಿತು ಸಮಗ್ರ ತನಿಖೆ ಮುಂದುವರಿದಿದೆ ಎಂದು ಸಂಸ್ಥೆ ಹೇಳಿದೆ.
ಇತರ ರಾಜ್ಯಗಳ ಪೋಲಿಸ್ ದಳಗಳ ಸಹಯೋಗದಲ್ಲೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎನ್ಐಎ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
