• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > International > ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದ ನಡುವೆ ಮೋದಿ ಭೂತಾನ್‌ ಪ್ರವಾಸ ಮುಕ್ತಾಯ
International

ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದ ನಡುವೆ ಮೋದಿ ಭೂತಾನ್‌ ಪ್ರವಾಸ ಮುಕ್ತಾಯ

CliQ INDIA
Last updated: November 12, 2025 1:50 pm
CliQ INDIA
Share
2 Min Read
SHARE

ಥಿಂಪು (ಭೂತಾನ್),12 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ಭೂತಾನ್‌ ಪ್ರವಾಸ ಇಂದು ಮುಕ್ತಾಯಗೊಂಡಿದೆ. ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವದ ಮಧ್ಯೆ ನಡೆದ ಈ ಭೇಟಿಯು ಎರಡು ರಾಷ್ಟ್ರಗಳ ರಾಜತಾಂತ್ರಿಕ ಮತ್ತು ಆಧ್ಯಾತ್ಮಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿದೆ.

ಭೂತಾನ್‌ನ ತಾಶಿಚೋಜಾಂಗ್‌ನಲ್ಲಿ ನಡೆದ ಬೃಹತ್ ಧಾರ್ಮಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಭಗವಾನ್ ಬುದ್ಧನ ಪವಿತ್ರ ಅವಶೇಷಗಳಿಗೆ ನಮನ ಸಲ್ಲಿಸಿದರು.

ಭಾರತದಿಂದ ತರಲಾದ ಭಗವಾನ್ ಬುದ್ಧನ ಅವಶೇಷಗಳನ್ನು ಭೂತಾನ್‌ನಲ್ಲಿ ಸ್ವೀಕರಿಸಿದ ಗೌರವದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಇದು ನಮ್ಮ ನಡುವಿನ ಅವಿನಾಭಾವ ಆಧ್ಯಾತ್ಮಿಕ ಬಂಧವನ್ನು ಪ್ರತಿಬಿಂಬಿಸುತ್ತದೆ. ಇದು ಭಗವಾನ್ ಬುದ್ಧನ ಶಾಂತಿ ಮತ್ತು ಸಾಮರಸ್ಯದ ಸಂದೇಶದಲ್ಲಿ ಬೇರೂರಿದೆ ಎಂದು ಪ್ರಧಾನಿ ತಮ್ಮ ಎಕ್ಸ ಖಾತೆಯಲ್ಲಿ ಹೇಳಿದ್ದಾರೆ.

ಹದಿನಾರು ದಿನಗಳ ಜಾಗತಿಕ ಶಾಂತಿ ಪ್ರಾರ್ಥನಾ ಉತ್ಸವ ನವೆಂಬರ್ 4ರಂದು ಪ್ರಾರಂಭವಾಗಿ ನವೆಂಬರ್ 19ರವರೆಗೆ ನಡೆಯಲಿದೆ. ಈ ಉತ್ಸವದಲ್ಲಿ ಭೂತಾನ್ ಸೇರಿದಂತೆ ಅನೇಕ ದೇಶಗಳ ಸಾವಿರಾರು ಸನ್ಯಾಸಿಗಳು, ಲಾಮಾಗಳು ಮತ್ತು ಭಕ್ತರು ಭಾಗವಹಿಸುತ್ತಿದ್ದಾರೆ. ವಿಶ್ವ ಶಾಂತಿ, ಕರುಣೆ ಮತ್ತು ಸಂತೋಷಕ್ಕಾಗಿ ಎಲ್ಲಾ ಬೌದ್ಧ ಸಂಪ್ರದಾಯಗಳನ್ನು ಒಂದೇ ವೇದಿಕೆಯಲ್ಲಿ ತರಲಾಗುತ್ತಿದೆ.

ಭಾರತದಿಂದ ತರಲಾದ ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ನವೆಂಬರ್ 8ರಂದು ಥಿಂಪು ತಲುಪಿದವು. ನವೆಂಬರ್ 12ರಿಂದ 17ರವರೆಗೆ ಅವುಗಳನ್ನು ತಾಶಿಚೋಜಾಂಗ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಇಡಲಾಗಿದೆ. ಪಿಪ್ರಾಹ್ವಾ (ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆ)ಯಿಂದ ಪತ್ತೆಯಾದ ಈ ಅವಶೇಷಗಳು ಪ್ರಾಚೀನ ಕಪಿಲ್‌ವಾಸ್ತುವಿನ ಭಾಗವೆಂದು ಪರಿಗಣಿಸಲಾಗಿದೆ.

ಭೂತಾನ್‌ನ ನಾಲ್ಕನೇ ರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಅವರ 70ನೇ ಹುಟ್ಟುಹಬ್ಬದ ಸ್ಮರಣಾರ್ಥ ಈ ಶಾಂತಿ ಉತ್ಸವವನ್ನು ಆಯೋಜಿಸಲಾಗಿದೆ.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಭೂತಾನ್ ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ ಉನ್ನತ ಮಟ್ಟದ ಮಾತುಕತೆ ನಡೆಸಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಕ್ರಮಗಳ ಕುರಿತು ಚರ್ಚಿಸಿದರು.

ಭಾರತವು ಭೂತಾನ್‌ಗೆ ₹4,000 ಕೋಟಿ ರಿಯಾಯಿತಿ ಸಾಲ ನೀಡುವುದಾಗಿ ಘೋಷಿಸಿತು. ಈ ಮೊತ್ತವನ್ನು ಇಂಧನ, ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು. ಭಾರತ–ಭೂತಾನ್ ಇಂಧನ ಸಹಕಾರದಲ್ಲಿ ಹೊಸ ಮೈಲಿಗಲ್ಲಾಗಿ 1020 ಮೆಗಾವ್ಯಾಟ್ ಸಾಮರ್ಥ್ಯದ ಪನ್ಬನ್‌ಸಂಗ್ಚು-II ಜಲವಿದ್ಯುತ್ ಯೋಜನೆಯನ್ನು ಇಬ್ಬರು ನಾಯಕರು ಜಂಟಿಯಾಗಿ ಉದ್ಘಾಟಿಸಿದರು.

ಇದೇ ವೇಳೆ ವಾರಣಾಸಿಯಲ್ಲಿ ಭೂತಾನ್ ದೇವಾಲಯ, ಮಠ ಮತ್ತು ಅತಿಥಿ ಗೃಹ ನಿರ್ಮಾಣಕ್ಕೆ ಭೂಮಿ ಹಂಚಿಕೆ, ಗೆಲೆಫುವಿನ ಹತಿಸರ್‌ನಲ್ಲಿ ಹೊಸ ವಲಸೆ ತಪಾಸಣಾ ಕೇಂದ್ರ ಸ್ಥಾಪಿಸುವುದಾಗಿ ಪ್ರಧಾನಿ ಘೋಷಿಸಿದರು.

ನವೀಕರಿಸಬಹುದಾದ ಇಂಧನ, ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರಗಳಲ್ಲಿ ಮೂರು ಒಪ್ಪಂದಗಳಿಗೆ ಸಹಿ ಹಾಕುವ

ಮೂಲಕ ಸಹಕಾರದ ಹೊಸ ದಿಕ್ಕು ತೆರೆದಿದೆ.

ಭೂತಾನ್ ರಾಜ ವಾಂಗ್‌ಚುಕ್, ದೆಹಲಿಯಲ್ಲಿ ನಡೆದ ಇತ್ತೀಚಿನ ಸ್ಫೋಟದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಮೋದಿ ಅವರು ಭೂತಾನ್‌ನ ಪ್ರಗತಿಪರ ದೃಷ್ಟಿಕೋನವನ್ನು ಶ್ಲಾಘಿಸಿ, “ಭಾರತ ಸದಾ ಭೂತಾನ್‌ನ ವಿಶ್ವಾಸಾರ್ಹ ಅಭಿವೃದ್ಧಿ ಪಾಲುದಾರನಾಗಿರುತ್ತದೆ” ಎಂದರು.

ಭಾರತವು ಭಗವಾನ್ ಬುದ್ಧನ ಅವಶೇಷಗಳನ್ನು ಸದ್ಭಾವನೆಯ ಉಡುಗೊರೆಯಾಗಿ ಭೂತಾನ್‌ಗೆ ಅರ್ಪಿಸಿರುವುದು ಎರಡೂ ದೇಶಗಳ ಆಧ್ಯಾತ್ಮಿಕ ಸಂಬಂಧದ ಸಂಕೇತವಾಗಿದೆ. ಈ ಮೂಲಕ ಭಾರತವು ಮತ್ತೊಮ್ಮೆ ವಿಶ್ವಕ್ಕೆ ಶಾಂತಿ, ಕರುಣೆ ಮತ್ತು ಮಾನವ ಏಕತೆಯ ಸಂದೇಶವನ್ನು ರವಾನಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಸಚಿವ ಪಿಯೂಷ್ ಗೋಯಲ್ ಇಂದಿನಿಂದ ಎರಡು ದಿನಗಳ ಮಸ್ಕತ್‌ ಪ್ರವಾಸ | BulletsIn
ಯುಎಸ್ ಇಸ್ರೇಲ್ ಇರಾನ್ ಕದನ ವಿರಾಮ ಬಿಕ್ಕಟ್ಟು ಲೆಬನಾನ್ ದಾಳಿಗಳು ಜಾಗತಿಕ ಎಚ್ಚರಿಕೆ ಮತ್ತು ಪ್ರಾದೇಶಿಕ ಯುದ್ಧದ ಮರುಹುಟ್ಟಿನ ಭಯವನ್ನು ತೀವ್ರಗೊಳಿಸುತ್ತದೆ
ಪಾಕಿಸ್ತಾನಕ್ಕೆ ದಾಳಿ ಎಚ್ಚರಿಕೆ ನೀಡಿದ ಗೂಢಚಾರರು | BulletsIn
ಪೋರ್ಚುಗಲ್ ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು | BulletsIn
ಚೀನಾದಲ್ಲಿ ಭಾರಿ ಮಳೆ, ಹೆದ್ದಾರಿ ಕುಸಿದು 36 ಮಂದಿ ಸಾವು,

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ರಾಜ್ಯಮಟ್ಟದ ಮಿನಿ ಓಲಂಪಿಕ್ಸ್ ; ಧಾರವಾಡ ಜಿಲ್ಲೆಗೆ 26 ಪದಕ
Next Article ಭಯೋತ್ಪಾದಕ ಶಾಹೀನ್‌ ಸಹೋದರ ಪರ್ವೇಜ್ ಬಂಧನ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?